ಮಂಗಳವಾರ, ಸೆಪ್ಟೆಂಬರ್ 3, 2013

ಅಶ್ವಿನಿ ಪೊನ್ನಪ್ಪ


ಅಶ್ವಿನಿ ಪೊನ್ನಪ್ಪ 

ಕರ್ನಾಟಕದ ಅಶ್ವಿನಿ ಪೊನ್ನಪ್ಪ ಅವರಿಗೆ ಅರ್ಜುನ ಪ್ರಶಸ್ತಿ ಗೌರವ ಸಂದಿದೆ.  ಅಶ್ವಿನಿ ಅವರಲ್ಲದೆ ಇಪ್ಪತ್ತೈದು ವಿವಿಧ ಕ್ರೀಡಾಪಟುಗಳಿಗೆ ಈ ವರ್ಷ ಈ ಪ್ರಶಸ್ತಿ ಸಂದಿದೆ.  ಲಂಡನ್ ಒಲಿಂಪಿಕ್ಸ್‌ನ ಮಹಿಳಾ ಡಬಲ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ ಅಶ್ವಿನಿ ಪೊನ್ನಪ್ಪ, ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ ವಿಶ್ವ ಬ್ಯಾಡ್ಮಿಂಟನ್ ಕೂಟಗಳಲ್ಲಿ ಕೂಡಾ ಗಮನ ಸೆಳೆದಿದ್ದಾರೆ. ಅವರ ಈ ಸಾಮರ್ಥ್ಯವನ್ನು ಪರಿಗಣಿಸಿ ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.

Tag: Ashwini Ponnappa

ಕಾಮೆಂಟ್‌ಗಳಿಲ್ಲ: