ಗುರುವಾರ, ಸೆಪ್ಟೆಂಬರ್ 5, 2013

ಈ ಹಸಿರು ಸಿರಿಯಲಿ


ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ.. ನವಿಲೆ
ಈ ನೆಲದ ನೆಲೆಯಲಿ ಕನಸು ಸುರಿಯಲಿ
ನವಿಲೇ...
ನೀನೇನೆ ನಾನಾಗುವೆ
ಗೆಲುವಾಗಿಯೆ ಉಲಿವೆ
ನವಿಲೇ.. ನವಿಲೆ

ತಂಗಾಳಿ ಬೀಸಿ ಬರದೆ
ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೆ
ನಿನ್ನ ಗೆಳತಿ ನಾನು ಮೊರೆವೆ
ತಂಗಾಳಿ ಬೀಸಿ ಬರದೇ
ಸೌಗಂಧಾ ಸುಖವ ತರದೇ
ಚಿಗುರೆಲೆಯು ಎಲ್ಲಿ ಮರವೇ
ನಿನ್ನ ಗೆಳತಿ ನಾನು ಮೊರೆವೆ
ಮತ್ಯಾಕೆ ಮೌನ ಗಿಳಿಯೇ
ಸಿಟ್ಯಾಕೆ ಎಂದು ತಿಳಿಯೆ
ಹೊತ್ಯಾಕೆ ಹೇಳು ಅಳಿಲೇ
ಗುಟ್ಯಾಕೆ ನನ್ನ ಬಳಿಯೆ
ಹೇಳೀರೆ ನಿಮ್ಮನ್ನ ನಾ ಹ್ಯಾಂಗ ಮರೆಯಲೇ ತೊರೆಯಲೇ

ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ ನವಿಲೆ

ಏನಂಥಾ ಮುನಿಸು ಗಿರಿಯೆ
ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ
ನನ್ನ ಜೀವ ಜೀವ ನದಿಯೇ
ಏನಂಥಾ ಮುನಿಸು ಗಿರಿಯೆ
ಮಾತನ್ನ ಮರೆತೆ ಸರಿಯೇ
ಜೇನಂಥಾ ಪ್ರೀತಿ ಸುರಿದೇ
ನನ್ನ ಜೀವ ಜೀವ ನದಿಯೇ
ಸುರಲೋಕಾ ಇದನು ಬಿಡಲೇ
ತವರೀಗೆ ಸಾಟಿ ಇದೆಯೇ
ಚಿರಕಾಲ ಇಲ್ಲೆ ಇರಲೇ
ನಗುತಿರು ನೀಲಿ ಮುಗಿಲೇ
ನಾನಿನ್ನು ನಿಮ್ಮಿಂದ ಬಹುದೂರ ಸಾಗುವೇ ಹರಸಿರೇ
ಈ ಹಸಿರು ಸಿರಿಯಲಿ ಮನಸು ಮೆರೆಯಲಿ
ನವಿಲೇ...
ನಿನ್ನಾಂಗೆಯೆ ಕುಣಿವೆ
ನಿನ್ನಂತೆಯೆ ನಲಿವೆ
ನವಿಲೇ ನವಿಲೆ
ನವಿಲೇ ನವಿಲೆ
ನವಿಲೇ ನವಿಲೆ

ಚಿತ್ರ: ನಾಗಮಂಡಲ
ಸಾಹಿತ್ಯ: ಗೋಪಾಲ ವಾಜಪೇಯಿ
ಸಂಗೀತ: ಸಿ ಅಶ್ವಥ್
ಗಾಯನ: ಸಂಗೀತ ಕಟ್ಟಿಕಾಮೆಂಟ್‌ಗಳಿಲ್ಲ: