ಶುಕ್ರವಾರ, ಸೆಪ್ಟೆಂಬರ್ 6, 2013

ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ

ಮಾನವನಾಗುವೆಯಾ ಇಲ್ಲ ದಾನವನಾಗುವೆಯಾ
ನೀ ಮಾನವ ಕುಲಕೇ ಮುಳ್ಳಾಗುವೆಯಾ
ಹೇಳೂ ನೀ ಹೇಳು, ಹೇಳೂ ನೀ ಹೇಳು

ಎಲ್ಲಾ ಗುಣಗಳು ನಿನ್ನಲೆ ಅಡಗಿ ಕಾಳಗ ಮಾಡುತಿವೇ
ಮನತುಂಬಿರುವ ಶಾಂತಿಯ ನುಂಗಿ ಕುಣಿಯಲು ನೋಡುತಿವೆ
ರೋಷವಾ ಬಿಡುವೆಯಾ ದ್ವೇಷವಾ ಮರೆವೆಯಾ
ರಕ್ಕಸನ ವಿಷ ಗಾಳಿಯ ನುಂಗದೆ ಬದುಕಿ ಎಲ್ಲರ ಉಳಿಸುವೆಯಾ
ಬದುಕಿ ಎಲ್ಲರ ಉಳಿಸುವೆಯಾ

ಧನ ಕನಕಗಳ ಕೇಳುವುದಿಲ್ಲ ಸ್ನೇಹದ ಹವ್ಯಾಸ
ನಿನ್ನಭಿಮಾನವ ಕೆಣಕುವುದಿಲ್ಲ ಪ್ರೇಮದ ಸಂತೋಷ
ಅಂದದಾ ತುಟಿಯಲೀ ಹುಸಿ ನಗೆ ತೇಲಲಿ
ಅಕ್ಕರೆ ನುಡಿಯ ಸಕ್ಕರೆ ರುಚಿಯ ನೀಡಿ ಎಲ್ಲರ ಗೆಲ್ಲುವೆಯಾ
ನೀನು ಎಲ್ಲರ ಗೆಲ್ಲುವೆಯಾ

ಚಿತ್ರ: ಬಹದ್ದೂರ್ ಗಂಡು
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ಎಂ. ರಂಗರಾವ್
ಗಾಯನ:  ರಾಜ್‍ಕುಮಾರ್

Tag: manavanaguveya illa danavanaguveya

ಕಾಮೆಂಟ್‌ಗಳಿಲ್ಲ: