ಮಂಗಳವಾರ, ಸೆಪ್ಟೆಂಬರ್ 3, 2013

ತೊರೆದು ಹೋಗದಿರೊ ಜೋಗಿ


ತೊರೆದು ಹೋಗದಿರೊ ಜೋಗಿ
ಅಡಿಗೆರಗಿಹ ಈ ದೀನಳ ಮರೆತು
ಸಾಗುವೆ ಏಕೆ ವಿರಾಗೀ
ಸಾಗುವೆ ಏಕೆ ವಿರಾಗೀ.
ತೊರೆದು ಹೋಗದಿರೊ ಜೋಗೀ

ಪ್ರೇಮಹೋಮದ ಪರಿಮಳ ಪಥದಲಿ 
ಸಲಿಸು ಭಿಕ್ಷೆಯೆನಗೆ 
ಪ್ರೇಮಹೋಮದ ಪರಿಮಳ ಪಥದಲಿ 
ಸಲಿಸು ಭಿಕ್ಷೆಯೆನಗೆ 
ನಿನ್ನ ವಿರಹದಲಿ ಉರಿದು ಹೋಗಲು
ನಿನ್ನ ವಿರಹದಲಿ ಉರಿದು ಹೋಗಲು
ಸಿದ್ಧಳಿರುವ ನನಗೆ
ಸಿದ್ಧಳಿರುವ ನನಗೆ

ಹೂಡುವೆ ಗಂಧದ ಚಿತೆಯಾ
ನಡುವೆ ನಿಲುವೆ ನಾನೇ
ಉರಿಸೋಕಿಸು ಪ್ರಭುವೇ
ಉರಿಸೋಕಿಸು ಪ್ರಭುವೇ
ಚಿತೆಗೇ, ಪ್ರೀತಿಯಿಂದ ನೀನೆ.

ಉರಿದೂ ಉಲಿವೆನು ಬೂದಿಯಲಿ
ಲೇಪಿಸಿಕೋ ಅದ ಮೈಗೆ
ಮೀರಾಪ್ರಭು ಗಿರಿಧರನೇ
ಮೀರಾಪ್ರಭು ಗಿರಿಧರನೇ ಜ್ಯೋತಿಯು
ಜ್ಯೋತಿಯ ತೇರಲಿ ಭೀಗೇ

ಸಾಹಿತ್ಯ: ಮೀರಾ ಭಜನ್ ಅನ್ನು ಕನ್ನಡಕ್ಕೆ ತಂದವರು ಡಾ. ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರು

Tag: Toredu Hogadiro Jogi

ಕಾಮೆಂಟ್‌ಗಳಿಲ್ಲ: