ಶುಕ್ರವಾರ, ಸೆಪ್ಟೆಂಬರ್ 6, 2013

ಈ ಹೃದಯಾ ಹಾಡಿದೆ,

ಈ ಹೃದಯಾ ಹಾಡಿದೆ,
ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ,
ಸುಮವೇ ನಿನಗಿನ್ನೂ ಕೇಳದೆ.

ಕನಸು ಮನಸಲ್ಲಿ
ಉಸಿರು ಉಸಿರಲ್ಲಿ
ನಿನ್ನ ಚಿಂತೆ ತುಂಬಿದೆ
ಗಾಳಿಯೂ ಬೀಸಲು
ಭ್ರಮೆಯಿಂದ ಅಲೆದಾಡಿದೆ

ಹಗಲು ಇರುಳಾಗಿ
ಇರುಳು ಹಗಲಾಗಿ
ದಿನ ರಾತ್ರಿ ಓಡಿದೆ
ಮರೆಯುವ ರೀತಿಯ
ನನ್ನಾಣೆ ನಾ ಕಾಣದೆ
ನೆನಪು ಎದೆಯಲ್ಲಿ
ತುಳುಕಾಡಿದೆ
ಈ ಹೃದಯಾ ಹಾಡಿದೆ
ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನೂ ಕೇಳದೆ

ಚಿಗುರು ಎಲೆಯಾಗಿ
ಮೊಗ್ಗು ಹೂವಾಗಿ
ಋತುಕಾಲ ಓಡಿದೆ
ತಡೆಯುವ ಶಕುತಿಯೂ
ನಿನ್ನಾಣೆ ನನಗಿಲ್ಲದೆ
ಕಡಲು ಮುಗಿಲಾಗಿ
ಮುಗಿಲು ಮಳೆಯಾಗಿ
ನದಿಯಾಗಿ ಓಡಿದೆ
ಬಯಕೆಯೂ ಮುಗಿಯದೇ
ಸುಖ ಶಾಂತಿ ನಾ ಕಾಣದೆ
ನಯನ ಕಣ್ಣೀರ ಹನಿಯಾಗಿದೆ
ಈ ಹೃದಯಾ ಹಾಡಿದೆ
ಆಸೆಗಳಾ ತಾಳದೆ
ಹುಡುಕುತ ನಿನ್ನ ಕೂಗಿದೆ
ಸುಮವೇ ನಿನಗಿನ್ನೂ ಕೇಳದೆ

ಚಿತ್ರ: ಸುಪ್ರಭಾತ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ಮತ್ತು ನಾಗೇಂದ್ರ
ಗಾಯನ: ಎಸ್, ಪಿ. ಬಿ. ಬಾಲಸುಬ್ರಮಣ್ಯಮ್

Tag: Ee hrudayaa haadide

1 ಕಾಮೆಂಟ್‌:

mudgal venkatesh ಹೇಳಿದರು...

ನಾನು ಬಹು ಇಷ್ಟ ಪಡುವ ಗೀತೆ ಇದು,,,,,