ಬುಧವಾರ, ಸೆಪ್ಟೆಂಬರ್ 4, 2013

ಕರೆದರೆ ಬರಬಾರದೆ


ಕರೆದರೆ ಬರಬಾರದೆ
ಗುರುವೇ ಕರೆದರೆ ಬರಬಾರದೆ    

ವರಮಂತ್ರಾಲಯ ಪುರಮಂದಿರ ತವ
ಚರಣ ಸೇವಕರು ಕರವ ಮುಗಿದು   
ನಿನ್ನ ಕರೆದರೆ ಬರಬಾರದೆ

ಹರಿದಾಸರು ಸುಸ್ವರ ಸಮ್ಮೇಳದಿ
ಪರವಶದಲಿ ಬಾಯ್ದೆರೆದು ಕೂಗಿ
ನಿನ್ನ ಕರೆದರೆ ಬರಬಾರದೆ

ಪೂಶರಪಿತ ಕಮಲೇಶವಿಠ್ಠಲನ
ದಾಸಾಗ್ರೇಸರರೀ ಸಮಯದಿ 
ನಿನ್ನ ಕರೆದರೆ ಬರಬಾರದೆ
ಗುರುವೇ ಕರೆದರೆ ಬರಬಾರದೆ

ಸಾಹಿತ್ಯ: ಕಮಲೇಶ ವಿಠ್ಠಲರು

Tag: Karedare Barabaarade

ಕಾಮೆಂಟ್‌ಗಳಿಲ್ಲ: