ಮಂಗಳವಾರ, ಸೆಪ್ಟೆಂಬರ್ 3, 2013

ಬಿರಾದಾರ್

'ಬಿರಾದಾರ'ರಿಗೆ ಅಂತರರಾಷ್ಟ್ರೀಯ ಪ್ರಶಸ್ತಿ

ಹಾಸ್ಯ ಪಾತ್ರಗಳಲ್ಲಿ ಕನ್ನಡ ಚಿತ್ರರಸಿಕರನ್ನು ರಂಜಿಸುತ್ತಿರುವ ಬಿರಾದಾರ್ ಅವರು ಗಿರೀಶ್ ಕಾಸರವಳ್ಳಿ ಅವರ 'ಕನಸೆಂಬೋ ಕುದುರೆಯನ್ನೇರಿ' ಚಿತ್ರದಲ್ಲಿನ ಅಭಿನಯಕ್ಕಾಗಿ ಸ್ಪೇನ್ ದೇಶದ ಮ್ಯಾಡ್ರಿಡ್ನಲ್ಲಿ ನಡೆದ 'ಇಮ್ಯಾಜಿನ್ ಇಂಡಿಯಾ ಅಂತರರಾಷ್ಟ್ರೀಯ ಚಿತ್ರೋತ್ಸವ'ದಲ್ಲಿ 'ಗೋಲ್ಡನ್ ವೀಲ್' ಪ್ರಶಸ್ತಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಮುನ್ನೂರಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಬಿರಾದಾರ್ ವಿದೇಶೀ ನೆಲದಲ್ಲಿ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದುಕೊಂಡ ಪ್ರಥಮ ನಟ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.  ಚಲನಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವವರ ಬದುಕು ಕಷ್ಟಕರವಾದದ್ದು ಎಂಬುದು ನಮಗೆಲ್ಲಾ ತಿಳಿದಿರುವ ವಿಚಾರ.  ಇಂತಹ ನಮ್ಮಲ್ಲಿನ  ಒಬ್ಬರು ಕಷ್ಟ ಜೀವಿ ಕಲಾವಿದರಿಗೆ ವಿಶ್ವಮಾನ್ಯತೆ ದೊರತಿರುವುದು ಸಂತಸದ ವಿಚಾರ.  ಬಿರಾದಾರ್ ಅವರಿಗೆ ನಮ್ಮ ಹೃತ್ಪೂರ್ವಕ ಅಭಿನಂದನೆ ಮತ್ತು ಶುಭ ಜೀವನವನ್ನು ಕೋರೋಣ.

ಮತ್ತೊಂದು ಚಿಂತನೀಯ ವಿಚಾರವೆಂದರೆ ಕ್ರಿಕೆಟ್ ಆಟದಲ್ಲಿ ಗೆದ್ದ ಕೋಟ್ಯಾಧಿಪತಿಗಳಿಗೆಸೈಟು, ಲಕ್ಷಾಂತರ ಹಣ ನೀಡುತ್ತೇವೆ ಎನ್ನುವ ನಮ್ಮ ರಾಜಕೀಯ ಮುಖಂಡತ್ವ ಇಂತಹ ಕಲಾವಿದರ ಸಾಧನೆಗೆ ಕೊಡಾ ಗೌರವ ಕೊಟ್ಟು ಅವರ ಬದುಕು ಉತ್ತಮಗೊಳ್ಳಲು ಕೂಡಾ  ನೆರವಾಗಲಿ.

Tag: Biradaar

ಕಾಮೆಂಟ್‌ಗಳಿಲ್ಲ: