ಶುಕ್ರವಾರ, ಸೆಪ್ಟೆಂಬರ್ 6, 2013

ಸಂಜೆ ಕೆಂಪು ಮೂಡಿತು

ಸಂಜೆ ಕೆಂಪು ಮೂಡಿತು
ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು
ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು

ಹಕ್ಕಿ ಗೂಡು ಸೇರಿತು
ಹೂವು ಮೊಗವ ಮುಚ್ಚಿತು
ದೂರ ತಾರೆ ಮಿನುಗಿತು
ನಗರವೆಲ್ಲ ಮಲಗಿತು
ಒರೆಸು ಕಣ್ಣ ಕಂಬನಿ
ಸುರಿಸು ನಿನ್ನ ನಗೆ ಹನಿ
ಇಂದು ನಾಳೆಯ ಸೇರಿತು
ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು

ಹೃದಯ ಭಾರವಾಗಿದೆ
ಚಿಂತೆ ನೂರು ಕವಿದಿದೆ
ನಾಳೆ ಆಸೆ ಒಂದಲೆ
ಜೀವವಿನ್ನು ಉಳಿದಿದೆ
ನಿದಿರೆ ತಾಯ ತೋಳಲಿ
ನಿನಗೆ ಸುಖವು ಕಾಣಲಿ
ಇಂದು ನಾಳೆಯ ಸೇರಿತು
ಮಲಗು ವೇಳೆ ಆಯಿತು
ಸಂಜೆ ಕೆಂಪು ಮೂಡಿತು

ಯಾರು ಇಲ್ಲಿ ಬರುವರೊ
ಯಾರ ದಾರಿ ಕಾವುದೊ
ಪ್ರೀತಿಯಿಂದ ಕರೆಯುವ
ಕೊರಳು ಇನ್ನೂ ಕೇಳದೊ
ಯಾರು ಇಲ್ಲ ಆಸರೆ
ಕಾವ ನಮ್ಮ ದೇವರೆ
ಇಂದು ನಾಳೆಯ ಸೇರಿತು
ಮಲಗು ವೇಳೆ ಆಯಿತು

ಸಂಜೆ ಕೆಂಪು ಮೂಡಿತು
ಇರುಳು ಸೆರಗು ಹಾಸಿತು
ಇಂದು ನಾಳೆಯ ಸೇರಿತು
ಮಲಗು ವೇಳೆ ಆಯಿತು

ಚಿತ್ರ: ತಂದೆ ಮಕ್ಕಳು
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಮ್ ಮತ್ತು ಪಿ. ಸುಶೀಲ

Tag: Sanje Kempu Muditu, Sanje Kempu Mooditu

ಕಾಮೆಂಟ್‌ಗಳಿಲ್ಲ: