ಸೋಮವಾರ, ಸೆಪ್ಟೆಂಬರ್ 2, 2013

ಸಾನಿಯಾ ಮಿರ್ಜಾ

ಸಾನಿಯಾ ಮಿರ್ಜಾ

ವಿಶ್ವ ಟೆನ್ನಿಸ್ ಕ್ರೀಡಾರಂಗದಲ್ಲಿ ಉತ್ತಮ ಆಟದಿಂದ ಮಿಂಚಿದವರು ಸಾನಿಯಾ ಮಿರ್ಜಾ.  ಟೆನ್ನಿಸ್ ಆಟದಲ್ಲಿ 30ರ ಆಸುಪಾಸಿನ ವಿಶ್ವಕ್ರಮಾಂಕ ಸಾಧನೆಯನ್ನೂ  ತಲುಪಿದ್ದ  ಸಾನಿಯಾ ಮಿರ್ಜಾ ನವೆಂಬರ್ 15, 1986ರಲ್ಲಿ ಮುಂಬೈನಲ್ಲಿ ಜನಿಸಿದರು.  ತಂದೆ ಇಮಾಂ ಮಿರ್ಜಾ ಅವರ ಮಾರ್ಗದರ್ಶನದಲ್ಲಿ ಆರನೆಯ ಎಳೆ ವಯಸ್ಸಿನಲ್ಲಿಯೇ ಟೆನ್ನಿಸ್ ತರಬೇತಿ ಪಡೆಯಲಾರಂಭಿಸಿದ ಸಾನಿಯಾ ಮಿರ್ಜಾ, 2003ರ ವರ್ಷದಲ್ಲಿ ಕಿರಿಯರ ವಿಂಬಲ್ಡನ್ ಜೋಡಿ ಸ್ಪರ್ಧೆಯನ್ನು ಗೆಲ್ಲುವ ಮೂಲಕ ಕೀರ್ತಿವಂತರಾದರು.  ಮುಂದೆ ವಿಂಬಲ್ಡನ್, ಆಸ್ಟ್ರೇಲಿಯನ್ ಮುಕ್ತ ಟೆನ್ನಿಸ್, ಅಮೆರಿಕದ ಮುಕ್ತ ಟೆನ್ನಿಸ್ ಪಂದ್ಯಾವಳಿ ಮುಂತಾದ ಗ್ರ್ಯಾಂಡ್ ಸ್ಲಾಮ್ ಕೂಟಗಳಲ್ಲಿ ಗಣನೀಯವಾದ ಪ್ರತಿಭೆತೋರಿದ್ದಲ್ಲದೆ ಜೋಡಿ ಸ್ಪರ್ಧೆಗಳ ಪ್ರಶಸ್ತಿ ವಿಜಯವನ್ನೂ ಸಾಧಿಸಿದರು.

ಭಾರತ ಸರ್ಕಾರದ ಪದ್ಮಶ್ರೀ, ಅರ್ಜುನ ಪ್ರಶಸ್ತಿಗಳ ಜೊತೆಗೆ ಅಪಾರ ಭಾರತೀಯ  ಜನಪ್ರೀತಿಯನ್ನು ಸಂಪಾದಿಸಿದ್ದ ಸಾನಿಯಾ ಮಿರ್ಜಾ ಆಯ್ದದ್ದು ಮಾತ್ರ ಪಾಕಿಸ್ತಾನದ ಪತಿಯನ್ನು.   ನಮ್ಮ ದೇಶದ ಹೆಣ್ಣು ಮಗಳು ಎಲ್ಲಾದರೂ ಸುಖವಾಗಿರಲಿ.

Tag: Sania Mirza

ಕಾಮೆಂಟ್‌ಗಳಿಲ್ಲ: