ಶುಕ್ರವಾರ, ಸೆಪ್ಟೆಂಬರ್ 27, 2013

ಅಭಿನವ್ ಬಿಂದ್ರಾ

ಅಭಿನವ್ ಬಿಂದ್ರಾ

ಭಾರತಕ್ಕೆ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಸ್ವರ್ಣ ಪದಕ ತಂದು ಕೊಟ್ಟ ಅಭಿನವ ಬಿಂದ್ರಾ ಅವರು ಸೆಪ್ಟೆಂಬರ್ 28, 1982ರಂದು ಡೆಹ್ರಾಡೂನಿನಲ್ಲಿ ಜನಿಸಿದರು.  1980ಕ್ಕೆ ಮುಂಚಿನ ವರ್ಷಗಳಲ್ಲಿ ಭಾರತವುತಂಡ ಕ್ರೀಡೆಯಾದ ಹಾಕಿ ಒಲಿಂಪಿಕ್ಸ್ ಸ್ಪರ್ಧೆಗಳಲ್ಲಿ ಚಿನ್ನದ ಪದಕ ಗಳಿಸಿದ್ದು ಹೊರತು ಪಡಿಸಿದಂತೆ   ಚಿನ್ನದ ಪದಕ ಎಂಬುದನ್ನು ಕಂಡದ್ದು  2008ರ ಒಲಿಂಪಿಕ್ಸ್ ಕ್ರೀಡೆಗಳಲ್ಲಿ ಅಭಿನವ್ ಬಿಂದ್ರಾ ಅವರ 10 ಎಂ ರೈಫಲ್ ಇಂದ  ಮಾತ್ರ.  ಹೀಗಾಗಿ ವೈಯಕ್ತಿಕ ಸ್ಪರ್ಧಿಯಾಗಿ ಭಾರತಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಭಿನವ್ ಬಿಂದ್ರಾ ಅವರು ಚರಿತ್ರಾರ್ಹ ವ್ಯಕ್ತಿಯೇ ಸರಿ. 

ಕಳೆದ  ಇಂಗ್ಲೆಂಡ್ ಒಲಿಂಪಿಕ್ಸ್   ಕ್ರೀಡೆಗಳಲ್ಲಿ ಪದಕ ವಂಚಿತರಾದರೂ, ತಮಗೇನೂ ನಿವೃತ್ತರಾಗುವ ಇಚ್ಛೆ ಇಲ್ಲ ಎನ್ನುವುದನ್ನು ಸ್ಪಷ್ಟಪಡಿಸುವ  ಮೂಲಕ ಅಭಿನವ್  ತಮಗೆ ತಮ್ಮ ಕ್ರೀಡೆಯಲ್ಲಿರುವ ಉತ್ಸುಕತೆಯನ್ನು  ದೃಢಪಡಿಸಿದ್ದರು. ಇದನ್ನು ಕೇವಲ ಬಾಯಿಮಾತಾಗಿಸದೆ,  ಕಳೆದ ಕಾಮನ್ ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನ ಹಾಗೂ ಇದೀಗ  ಏಷ್ಯನ್ ಕ್ರೀಡಾ ಕೂಟದಲ್ಲಿ ಗಳಿಸಿದ ಎರಡು ಕಂಚು ಪದಕಗಳ ಮೂಲಕ ಮತ್ತೊಮೆ ಸಾಧಿಸಿ ತೋರಿದ್ದಾರೆ. 

ಭಾರತೀಯ ಮನಗಳಲ್ಲಿ ನಾವೂ ಒಲಿಂಪಿಕ್ಸ್ ಪದಕ ಗೆಲ್ಲಲು ಸಾಧ್ಯ ಎಂಬ ಭರವಸೆ ಮೂಡಿಸಿರುವ ಬಿಂದ್ರಾ ಅವರ ಸಾಧನೆ, ಭಾರತೀಯ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿನ ಫಲಿತಾಂಶಗಳಲ್ಲಿ ಬಹಳಷ್ಟು ಉತ್ತೇಜನಕಾರಿ  ಬದಲಾವಣೆ ತಂದಿವೆ ಎಂಬುದು ಗಮನಾರ್ಹವಾಗಿದೆ.  ನಮ್ಮ ಚಿನ್ನದ ಹುಡುಗ ಅಭಿನವ್ ಬಿಂದ್ರಾ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭ ಹಾರೈಕೆಗಳು.


Tag: Abhinav Bhindra

ಕಾಮೆಂಟ್‌ಗಳಿಲ್ಲ: