ಭಾನುವಾರ, ಸೆಪ್ಟೆಂಬರ್ 1, 2013

ಉದಿತ್ ನಾರಾಯಣ್

ಉದಿತ್ ನಾರಾಯಣ್

ಬರೀ ಓಳು ಬರೀ ಓಳುಎಂದು ಕನ್ನಡದಲ್ಲಿ  ಹಾಡಿ, ‘ಕುಣಿ ಕುಣಿದು ಬಾರೆಎಂದು ಇಂದಿನ ಸಂಗೀತ ಪ್ರಿಯರನ್ನು ತಣಿಸುವ ಪ್ರಖ್ಯಾತ ಹಿನ್ನಲೆ ಗಾಯಕ ಉದಿತ್ ನಾರಾಯಣ್ ಜನಿಸಿದ್ದು ಡಿಸೆಂಬರ್ 1, 1955ರಲ್ಲಿ.  ಮಹಮದ್ ರಫಿ, ಕಿಶೋರ್ ಅಂತಹ ಗಾಯಕರ ನಂತರದ ತಲೆಮಾರಿನ ಪ್ರಮುಖ ಗಾಯಕರಲ್ಲಿ ಒಬ್ಬರಾಗಿರುವ ಈ ಸುರದ್ರೂಪಿ ನೇಪಾಳದಲ್ಲಿ ಜನಿಸಿದವರು.

ಪಾಪ್ಪಾ ಕೆಹೆತೇ ಹೈ ಬಡಾ ನಾಮ್‌ ಕರೇಗಾ‘ , ‘ಜಾದೂ ತೇರಿ ನಜರ್‌‘, ‘ಪೆಹಲಾ ನಶಾ ಪೆಹಲಾ ಖುಮಾರ್‘, ‘ಹೇ ಅಜ್‌ ನಬೀ ತೂ ಭೀ ಕಭೀ ಆವಾಜ್‌ ದೇ ಕಹೀ ಸೇ‘, ‘ಮೆಹಂದಿ ಕರಾಗೆ ಲಕ್ ನಾ’, ‘ಪರ್ದೇಶಿ ಪರ್ದೇಶಿ’, ‘ಚಾಂದ್ ಚೂಪಾ ಬಾದಲ್ ಮೇ’,  ‘ಮಿತ್ ವಾ ಓ ಮಿತ್ ವಾ’, ‘ರಾಧಾ ಕೈಸೇನ ಜಲೇ’, ‘ಕುಚ್ ಕುಚ್ ಹೋತಾ ಹೈ’, ‘ಯೆಹ್ ತಾರ ವೂ ತಾರಮುಂತಾದ ಅನೇಕ ಮಧುರ ಗೀತೆಗಳನ್ನು ಹಾಡಿರುವ ಉದಿತ್ ಇಂದು ಭಾರತದ ಬಹುಭಾಷೆಗಳಲ್ಲಿ ಬಿಡುವಿಲ್ಲದೆ ಹಿನ್ನಲೆ ಗಾಯನದಲ್ಲಿ ನಿರತರಾಗಿದ್ದಾರೆ. 

ಹಿನ್ನಲೆ ಗಾಯನದ ಜೊತೆಗೆ ಹಲವಾರು ಕಾರ್ಯಕ್ರಮಗಳು, ದೂರದರ್ಶನದ ಪ್ರಸಿದ್ಧ ಕಾರ್ಯಕ್ರಮಗಳು, ವಿದೇಶಿ ಯಾತ್ರೆ ಇವೆಲ್ಲವೂ ಇಂದಿನ ಬಹುತೇಕ ತಾರೆಯರಿಗಿರುವಂತೆ ಉದಿತ್ ನಾರಾಯಣರಿಗೆ ಕೂಡಾ ಉಂಟು.  ಇಷೆಲ್ಲಾ ಇದ್ದು ಪ್ರಸಿದ್ಧಿಯ ಜೊತೆ ಬರುವ ಕೆಲವು ಚಾಳಿ, ತಾಪತ್ರಯಗಳು ಇಲ್ಲದಿದ್ದರೆ ಹೇಗೆ!  ಅವೂ ಉಂಟು!

Tag: Udit Narayan

ಕಾಮೆಂಟ್‌ಗಳಿಲ್ಲ: