ಬುಧವಾರ, ಸೆಪ್ಟೆಂಬರ್ 4, 2013

ಹನುಮಂತ ದೇವ ನಮೋ


ಹನುಮಂತ ದೇವ ನಮೋ
ವನಧಿಯನು ದಾಟಿ ದಾನವರ ದಂಡಿಸಿದ

ಅಂಜನಾದೇವಿಯ ಗರ್ಭ ಪುಣ್ಯೋದಯನೆಂದೆನಿಪೆ
ಕಂಜಸಖ ಮಂಡಲಕೆ ಕೈದುಡುಕಿದೆ
ಭುಂಜಿಸಿರಲು ಜಗಂಗಳನು ನಡುಗಿಸಿದೆ
ಭಂಜರತ್ನನೆ ನಿನಗೆ ಸರಿ ಯಾರು ಗುರುವೇ

ಹೇಮಕುಂಡಲ ಹೇಮಯಜ್ಞೋಪವೀತಧರ
ಹೇಮಕಟಿಸೂತ್ರ ಕೌಪೀನವನು ಧರಿಸಿ
ರೋಮಕೆ ಕೋಟಿಲಿಂಗ ಸರ್ವಾಂಗ
ರಾಮಭೃತ್ಯನು ನಿನಗೆ ಸರಿ ಯಾರು ಗುರುವೇ

ಅಕ್ಷಯ ಕುಮಾರಕನ ನಿಟ್ಟೊರಸಿ ಪಿಸುಟು ನೀ
ರಾಕ್ಷಾಸಾಧಿಪ ರಾವಣನ ರಣದಲ್ಲಿ
ವಕ್ಷಸ್ಥಳದಲ್ಲಿ ಶಿಕ್ಷಿಸಲು ಮೂರ್ಷೇಯ ಬಕೆಯ ರಕ್ಷಿಸಿದೆ
ರಕ್ಷಿಸಿದೆ ರಾಯ ಬಲವಂತ

ರಾಮ ಲಕ್ಷ್ಮಣರ ಕಟ್ಟಾಳಾಗಿ ಮೆರೆದೆ
ಭೂಮಿಜೆಗೆ ಮುದ್ರೆಯುಂಗುರವನಿತ್ತೆ
ಆ ಮಹಾಲಂಕೆ ನಗರವನೆಲ್ಲವನು
ಧೂಮಧಾಮವ ಮಾಡಿ ಮೆರೆದೆ ಮಹಾತ್ಮ

ಶ್ರೀಮದಾಚಾರ್ಯರ ಪುರಪತಿಯೆಂದೆನಿಪ
ಶ್ರೀಮಹಾಲಕುಮಿ ನಾರಾಯಣಾ ರೂಪ
ಶ್ರೀಮನೋಹರ ಪುರಂದರ ವಿಠ್ಠಲನದಾಸ
ಪ್ರೇಮದಾಳು ಹನುಮಂತ ಬಲವಂತ

ಸಾಹಿತ್ಯ: ಪುರಂದರದಾಸರು

Tag: Hanumanta Deva namo

ಕಾಮೆಂಟ್‌ಗಳಿಲ್ಲ: