ಬುಧವಾರ, ಸೆಪ್ಟೆಂಬರ್ 4, 2013

ನೀ ತಂದೆ ನಾ ಕಂದ

ನೀ ತಂದೆ ನಾ ಕಂದ 

ನೀ ತಂದೆ ನಾ ಕಂದ, ಇದು ನಮ್ಮ ಅನುಬಂಧ
ಬೇರೇನು ನಾ ಅರಿಯೆನು, ನಿನ್ನಾಣೆ ನಿಜವನ್ನೆ ನಾ ನುಡಿವೆನು

ನೀ ತಂದೆ ನಾ ಬಂದೆ, ನಡೆಸಿದಂತೇ ನಡೆದೆ
ಕಲಿಸಿದ ಮಾತು ಕಲಿತೆ, ಗುರುರಾಯ ಇನ್ನೇಕೆ ನನಗೆ ಚಿಂತೆ

ಎಡವಿದರು ನೀನಿರುವೆ ತೊದಲಿದರು ನೀನಿರುವೆ
ನಿನ್ನದೆ ಎಲ್ಲ ಎನುವೆ, ಗುರುರಾಯ ನನ್ನದೇನಿಲ್ಲ ಎನುವೆ

ನಗಿಸಿದರೆ ನಾ ನಗುವೆ, ಅಳಿಸಿದರೆ ನಾ ಅಳುವೆ
ಕಾರಣ ನಾ ಕೇಳೆನು, ಗುರುರಾಯ ಬಲ್ಲೆ ನೀನೆಲ್ಲವನ್ನು.

ನೋವಿನಲೆ ಮುಳುಗಿರಲಿ ಕಣ್ಣೀರು ಕಲೆತಿರಿಲಿ
ಕಾಪಾಡು ಬಾ ಎನ್ನೆನು, ಕಂದನ ತಂದೆಯು ಮರೆವನೇನು

ಬಿಸಿಲಲ್ಲಿ ನೆರಳಲ್ಲಿ,  ಹಗಲಲ್ಲಿ ಇರುಳಲ್ಲಿ
ಗುರುರಾಘವೇಂದ್ರ ಎನುವೆ,  ಆ ಕ್ಷಣವೆ ಆನಂದವಾ ಹೊಂದುವೆ

ಎಲ್ಲಿರಲಿ ಹೇಗಿರಲಿ ದೂರದಲೆ ನಾನಿರಲಿ
ಭಯವನ್ನೆ ನಾ ಕಾಣೆನು. ಗುರುರಾಯ ರಕ್ಷಣೆಗೆ ಇರಲು ನೀನು

ನೀ ಬಂದು ನಿಂತರೂ, ವರವ ಕೇಳೆಂದರು
ಎನೊಂದನೂ  ಬೇಡೆನು, ಗುರುರಾಯ ಕೊಡುವೆ ನೀನೆಲ್ಲವನ್ನು

ಹೂವಿನಾ ಹೃದಯದಲಿ  ಪರಿಮಳವು ಬೆರೆತಂತೆ
ನನ್ನೆದೆಯ ಗುಡಿಯಲ್ಲಿಯೆ, ನೀನಿರಲು ಚಿಂತೆಯ ಮಾತೆಲ್ಲಿದೆ..

ನೀ ತಂದೆ ನಾ ಕಂದ, ಇದು ನಮ್ಮ ಅನುಬಂಧ
ಬೇರೆನು ನಾ ಅರಿಯೆನು, ಗುರುರಾಯ ನಿಜವನ್ನೆ ನಾ ನುಡಿವೆನು

ಸಾಹಿತ್ಯ:  ಚಿ. ಉದಯಶಂಕರ್Tag: Nee tande naa kanda

ಕಾಮೆಂಟ್‌ಗಳಿಲ್ಲ: