ಶನಿವಾರ, ಸೆಪ್ಟೆಂಬರ್ 7, 2013

ಹಾಡು ಹಕ್ಕಿಗಳೆ ಹಾರಿ ಬಾನಿಗೆ.


ಹಾಡು ಹಕ್ಕಿಗಳೆ ಹಾರಿ ಬಾನಿಗೆ
ಮರದ ಗೂಡಿನಿಂದ;
ಹೋಗಿ ಚೆಲ್ಲಿರಿ ದಿಕ್ಕು ದಿಕ್ಕಿಗೂ
ಒಳಗಿನ ಆನಂದ.

ಕಣ್ಣ ಪಡೆದಿರಿ ಬಣ್ಣ ಪಡೆದಿರಿ
ರೆಕ್ಕೆ ಪುಕ್ಕ ಮಾಟ;
ಕಾಲು ಬಲಿಯಿತು ಕಾಲ ಸಂದಿತು
ಇನ್ನು ಹಾರುವಾಟ.

ದಾರಿ ದಾರಿಯಲಿ ರೆಂಬೆ ರೆಂಬೆಯಲಿ
ಕುತೂ ರಾಗ ಹಾಡಿ;
ದಾರಿ ಸಾಗುವ ದಣಿದ ಜೀವಕೆ
ಕೊಂಚ ಮುದವ ನೀಡಿ.

ನಿಮ್ಮ ದನಿಯ ಆನಂದ ಚಿಮ್ಮಲಿ
ಕೇಳಿದವರ ಎದೆಗೆ;
ಯಾವ ಹಕ್ಕಿ ಇವು, ಬಂದುದೆಲ್ಲಿಂದ
ಎಂಬ ಬೆರಗು ಕವಿಯೆ.

ಸಾಹಿತ್ಯ: ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Tag: Hadu hakkigale haari banige, haadu hakkigale haari baanige

ಕಾಮೆಂಟ್‌ಗಳಿಲ್ಲ: