ಬುಧವಾರ, ಸೆಪ್ಟೆಂಬರ್ 4, 2013

ಬಾರೋ ಕೃಷ್ಣಯ್ಯ


ಆನೆಯು ಕರೆದರೆ ಆದಿಮೂಲ ಬಂದಂತೆ
ಅಜಾಮಿಳನು ಕರೆದರೆ ನಾರಾಯಣ ಬಂದಂತೆ
ಅಡವಿಯಲ್ಲಿ ಧ್ರುವರಾಯ ಕರೆದರೆ ವಾಸುದೇವ ಬಂದಂತೆ
ಸಭೆಯಲ್ಲಿ ದ್ರೌಪದಿ ಕರೆದರೆ ಶ್ರೀಕೃಷ್ಣ ಬಂದಂತೆ
ನಿನ್ನ ದಾಸರ ದಾಸನು ನಾ ಕರೆದರೆ
ಎನ್ನ ಪಾಲಿಸಬೇಕು ಪುರಂದರ ವಿಠಲ

ಬಾರೋ ಕೃಷ್ಣಯ್ಯ ನಿನ್ನ ಭಕ್ತರ ಮನೆಗೀಗ ರಂಗಯ್ಯ
ಬಾರೋ ನಿನ್ನ ಮುಖ ತೊರೋ ನಿನ್ನ ಸರಿ ಯಾರೋ ಜಗಧರಾಶೀಲನೆ

ಅಂದುಗೆ ಪಾಡಗವು ಕಾಲಂದುಗೆ ಕಿರು ಗೆಜ್ಜೆ
ಧಿಂಧಿಮಿ ಧಿಮಿಧಿಮಿ ಧಿಮಿ ಎನುತ
ಪೊಂಗೊಳಲನೂದುತ ಬಾರಯ್ಯ

ಕಂಕಣ ಕರದಲ್ಲಿ ಹೊನ್ನುಂಗುರ ಹೊಳೆಯುತೆ
ಕಿಂಕಿಣಿ ಕಿಣಿಕಿಣಿ ಕಿಣಿರೆನುತ
ಪೊಂಗೊಳಲನೂದುತ ಬಾರಯ್ಯ

ವಾಸ ಉಡುಪಿಲಿ ನೆಲೆಯಾದಿಕೇಶವನೆ
ದಾಸ ನಿನ್ನ ಪದ ದಾಸ
ದಾಸ ನಿನ್ನ ಪದ ದಾಸ ನಿನ್ನ ಪಾದದಾಸ
ಸಲಹಲು ಬಾರಯ್ಯ

ಉಗಾಭೋಗ: ಪುರಂದರದಾಸರು
ಬಾರೋ ಕೃಷ್ಣಯ್ಯ ಗೀತೆ: ಕನಕದಾಸರುTag: Baro Krishnaiaha

ಕಾಮೆಂಟ್‌ಗಳಿಲ್ಲ: