ಬುಧವಾರ, ಸೆಪ್ಟೆಂಬರ್ 4, 2013

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ


ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
ಸುಮ್ಮನಿರುವ ತಂತಿಯನ್ನು ಮೀಟಲಾರೆಯ
ತಾಳಲಾರೆ ರಾಘವೇಂದ್ರ ಕೇಳುವಾಸೆಯ
ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ
ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ

ಗಾನ ಲಹರಿ ಜಗವನೆಲ್ಲ....
ಗಾನ ಲಹರಿ ಜಗವನೆಲ್ಲ ತುಂಬಿ ಕುಣಿಸಲಿ
ಧ್ಯಾನದಲ್ಲಿ ಲೀನವಾಗಿ ಜೀವ ನಲಿಯಲಿ
ನಾನು ಎಂಬ ಭಾವವಿಂದೆ ಕರಗಿ ಹೋಗಲಿ
ನೀನೇ ತನುವ ಮನವ ತುಂಬಿ ಬಾಳ ಬೆಳಗಲಿ
ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
ಸುಮ್ಮನಿರುವ ತಂತಿಯನ್ನು ಮೀಟಲಾರೆಯ

ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ
ವೇದಘೋಷ ಜೊತೆಗೆ ಸೇರಿ ಶೃತಿಯ ಬೆರಸಲಿ
ನಾದಗಂಗೆಯಲ್ಲೀ .... ಜೀವ ರಾಶಿ ಮುಳುಗಲಿ
ಶಾರದೆಯೇ ಮೈ ಮರೆತು ತಲೆಯದೂಗಲಿ
ಶಾರದೆಯೇ ಮೈ ಮರೆತು ತಲೆಯದೂಗಲಿ

ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ
ಸುಮ್ಮನಿರುವ ತಂತಿಯನ್ನು ಮೀಟಲಾರೆಯ
ತಾಳಲಾರೆ ರಾಘವೇಂದ್ರ ಕೇಳುವಾಸೆಯ
ಬಾಳಿನಲ್ಲಿ ಬೆರೆಸು ನಿನ್ನ ನಾದಮಹಿಮೆಯ
ಒಮ್ಮೆ ನಿನ್ನ ವೀಣೆಯನ್ನು ನುಡಿಸಲಾರೆಯ

ಸಾಹಿತ್ಯ: ಚಿ. ಉದಯಶಂಕರ್Tag: Omme ninna veeneyannu nudisalareya

ಕಾಮೆಂಟ್‌ಗಳಿಲ್ಲ: