ಸೋಮವಾರ, ಸೆಪ್ಟೆಂಬರ್ 2, 2013

ಏಣಗಿ ನಟರಾಜ

ಏಣಗಿ ನಟರಾಜ
-ಗೋಪಾಲ ವಾಜಪೇಯಿ

ಏಣಗಿ ನಟರಾಜ. ಕನ್ನಡ ರಂಗಭೂಮಿ ಕಂಡ ಅಪರೂಪದ ನಟ.
ವೃತ್ತಿ ಮತ್ತು ಆಧುನಿಕ ರಂಗಭೂಮಿಗಳೆರಡರಲ್ಲೂ ಅಪಾರ ಜ್ಞಾನ ಮತ್ತು ಅನುಭವವಿದ್ದ ಕಲಾವಿದ.  ಆತನ ಅಭಿನಯ ಮತ್ತು ಸಂಭಾಷಣೆಯನ್ನು ಎತ್ತಿಕೊಂಡು ಅದನ್ನು ನಮಗೆ ತಲಪಿಸುತ್ತಿದ್ದ ರೀತಿ ಅನನ್ಯವಾಗಿತ್ತು. ಅದು ಒಂದೇ ಸಾಲಿರಲಿ, ಇಡೀ ಪುಟದ ಸಂಭಾಷಣೆ ಇರಲಿ, ಅದಕ್ಕೆ 'ನಟರಾಜ ಸ್ಪರ್ಶ' ಸಿಕ್ಕರೆ ಸಾಕು ಹೊಸ ಅರ್ಥವೇ ಸಿಗುತ್ತಿತ್ತು.

ಆತ ಒಂದರ್ಥದಲ್ಲಿ ಯಾವುದೇ ನಾಟಕಕಾರನ ಕೃತಿಯ 'ನಿಜವಾದ ವ್ಯಾಖ್ಯಾನಕಾರ'ನಾಗಿದ್ದ...

ಅಭಿನಯದಲ್ಲಿ ಅವನನಿಗೆ ಅವನೇ ಸಾಟಿ. ನಿಜಕ್ಕೂ ಅವನೊಬ್ಬ 'ನಟ ಸಮ್ರಾಟ.'

ಆತ ಬದುಕಿದ್ದರೆ ಇವತ್ತಿಗೆ 54 ವರ್ಷ ತುಂಬಿ 55 ರಲ್ಲಿ ಕಾಲಿಡುತ್ತಿದ್ದ.
ಈ ಸಂದರ್ಭದಲ್ಲಿ ನನಗೆ ಆತನೊಂದಿಗಿನ ಒಡನಾಟದ ಕ್ಷಣಗಳು ಕಣ್ಣ ಮುಂದೆ ಕಟ್ಟುತ್ತಿವೆ.

Tag: Enagi Nataraja

ಕಾಮೆಂಟ್‌ಗಳಿಲ್ಲ: