ಶನಿವಾರ, ಸೆಪ್ಟೆಂಬರ್ 7, 2013

ಗೌರಿ ಮನೋಹರಿಯ ಕಂಡೆ

ಗೌರಿ ಮನೋಹರಿಯ ಕಂಡೆ
ನಾ ಪುರುಷನ ನಿಜರೂಪದೆ
ಯೌವನದ ಮರೆಯಲ್ಲೂ ಶ್ಯಾಮ
ಅವ ಕವಿರಾಜ ಸಂಗೀತಬ್ರಹ್ಮ
ಅವ ಕವಿರಾಜ ಸಂಗೀತಬ್ರಹ್ಮಾ

ನನ್ಹೆಸರೇನೋ ಇನಿದಾದ ರಾಗ
ಫಲ ಶ್ರೀದೇವಿ ನಿಜ ಮೈತ್ರಿ ಯೋಗ
ನೀ ಮಳೆ ತಂದು ನಲಿದಾಡೋ ಮೇಘ
ತನ್ನ ವಯಸನ್ನು ಲೆಖ್ಖಿಸದ ವೇಗ
ತನ್ನ ವಯಸನ್ನು ಲೆಖ್ಖಿಸದ ವೇಗಾ

ಗೌರಿ ಮನೋಹರಿಯ ಕಂಡೆ
ನಾ ಹೆಣ್ಣಿನ  ನಿಜರೂಪದೆ
ಯೌವನದ ಮರೆಯಲ್ಲೂ ರಾಧೇ
ನೀ ಕವಿಕಂಡ ಸಂಗೀತವಾದೆ

ತಾಯ್ತನದೆ ನಾ ಕಂಡೆ ಗಾನ
ನನ್ನ ಮನದಲ್ಲಿ ಇಂದೇಕೋ ಮೌನ
ನಿನ್ನಂದ ಕಂಡಾಗ ಕಣ್ಣು
ನಾ ಕಲ್ಲಲ್ಲ ಕಣ್ಣಾದ ಹೆಣ್ಣು
ತಪ್ಪೆಂದು ತೆಗಳೋರು ನೂರು
ಹೆಣ್ಣ ಮನಸನ್ನು ಅರಿತೋರು ಯಾರು
ಇಂದು ನನ್ಪಾಡು ನಾ ತಾನೇ ತಿಳಿವೇ
ನನ್ನ ಮನದಲ್ಲಿ ಮನಸಾರೆ ಬೆರೆವೆ
ಗೌರಿ ಮನೋಹರಿಯ ಕಂಡೆ
ನಾ ಪುರುಷನ ನಿಜರೂಪದೆ

ಗಿರಿ ಮೇಲೆ ತಾಕಿದರು ಗಾಳಿ
ಅದು ನದಿ ಮೇಲೆ ಹಾಡಿದರೂ ಗಾಳಿ
ವಯಸಲ್ಲಿ ಬಂದಾಗ್ಯೂ  ಪ್ರೀತಿ
ಅದು ತಡವಾಗಿ ಬಂದಾಗ್ಯೂ ಪ್ರೀತಿ
ಕಾವ್ಯಕ್ಕೆ ಕೆಲನೂರು ಬರಹ
ನಿಜಬಂಧಕ್ಕೆ ಮುಖ ಕೋಟಿ ತರಹ
ನಿನ್ನ ಮನಸ್ಸಾಕ್ಷಿ ನುಡಿದಂತೆ ಕೇಳು
ನೀ ಜನ ನುಡಿಗೆ ಅಂಜದೆಯೆ ಬಾಳು

ಗೌರಿ ಮನೋಹರಿಯ ಕಂಡೆ
ನಾ ಪುರುಷನ ನಿಜರೂಪದೆ
ಗೌರಿ ಮನೋಹರಿಯ ಕಂಡೆ
ನಾ ಹೆಣ್ಣಿನ  ನಿಜರೂಪದೆ

ಚಿತ್ರ: ಮಕ್ಕಳ ಸೈನ್ಯ
ಸಾಹಿತ್ಯ:  ಆರ್ ಎನ್ ಜಯಗೋಪಾಲ್
ಸಂಗೀತ: ಕೆ ವಿ ಮಹಾದೇವನ್
ಗಾಯನ: ಎಸ್ ಪಿ ಬಾಲಸುಬ್ರಮಣ್ಯಮ್ ವಾಣಿ ಜಯರಾಂ


Tag: Gowri Manohariya kande, Gouri manohariya kande
ಕಾಮೆಂಟ್‌ಗಳಿಲ್ಲ: