ಬುಧವಾರ, ಸೆಪ್ಟೆಂಬರ್ 4, 2013

ಯಾದವ ನೀ ಬಾ


ಯಾದವ ನೀ ಬಾ ಯದುಕುಲನಂದನ
ಮಾಧವ ಮಧುಸೂದನ ಬಾರೋ 
ಸೋದರ ಮಾವನ ಮಥುರೇಲಿ ಮಡುಹಿದ
ಯಶೋದೆಕಂದ ನೀ ಬಾರೋ

ಶಂಖಚಕ್ರಗಳು ಕರದಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ 
ಅಕಳಂಕಮಹಿಮ ಆದಿನಾರಾಯಣ
ಬೇಕೆಂಬ ಭಕುತರಿಗೊಲಿಬಾರೋ 

ಕಣಕಾಲಂದುಗೆ ಘಲುಘಲುರೆನುತಲಿ 
ಝಣಝಣ ವೇಣುನಾದದಲಿ 
ಚಿಣ್ಣಿಕೋಲು ಚೆಂಡು ಬುಗುರಿಯನಾಡುತ 
ಸಣ್ಣ ಸಣ್ಣ ಗೋವಳರೊಡಗೂಡಿ

ಖಗವಾಹನನೇ ಬಗೆಬಗೆ ರೂಪನೇ 
ನಗುಮೊಗದರಸನೇ ನೀ ಬಾರೋ 
ಜಗದೊಳು ನಿನ್ನಯ ಮಹಿಮೆಯ ಪೊಗಳುವೆ 
ಪುರಂದರವಿಠ್ಠಲ ನೀ ಬಾರೋ

ಸಾಹಿತ್ಯ: ಪುರಂದರದಾಸರು

ಪಂಡಿತ್ ಭೀಮಸೇನ ಜೋಶಿ ಅವರ ಧ್ವನಿಯಲ್ಲಿ



ವಿದುಷಿ ಬಾಂಬೆ ಜಯಶ್ರೀ ಅವರ ಧ್ವನಿಯಲ್ಲಿ



Tag: Yadava nee baa yadukula nandana
Tag: Yadava nee baa

ಕಾಮೆಂಟ್‌ಗಳಿಲ್ಲ: