ಸೋಮವಾರ, ಸೆಪ್ಟೆಂಬರ್ 16, 2013

ಅನಂತ ಪ್ರಣಯ

ಅನಂತ ಪ್ರಣಯ

ಉತ್ತರಧ್ರುವದಿಂ ದಕ್ಷಿಣಧ್ರುವಕೂ
ಚುಂಬಕ ಗಾಳಿಯು ಬೀಸುತಿದೆ.
ಸೂರ್ಯನ ಬಿಂಬಕೆ ಚಂದ್ರನ ಬಿಂಬವು
ರಂಬಿಸಿ ನಗೆಯಲಿ ಮೀಸುತಿದೆ.

ಭೂರಂಗಕೆ ಅಭಿಸಾರಕೆ ಕರೆಯುತ
ತಿಂಗಳು ತಿಂಗಳು ನವೆಯುತಿದೆ
ತುಂಬುತ ತುಳುಕುತ ತೀರುತ ತನ್ನೊಳು
ತಾನೇ ಸವಿಯನು ಸವಿಯುತಿದೆ.

ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ
ಕೋಟಿ ಕೋಟಿ ಸಲ ಹೊಸಯಿಸಿತು.
ಮಿತ್ರನ ಮೈತ್ರಿಯ ಒಸಗೆ ಮಸಗದಿದೆ
ಮರುಕದ ಧಾರೆಯ ಮಸೆಯಿಸಿತು.

ಅಕ್ಷಿನಿಮೀಲನ ಮಾಡದ ನಕ್ಷ-
ತ್ರದ ಗಣ ಗಗನದಿ ಹಾರದಿದೆ
ಬಿದಿಗೆಯ ಬಿಂಬಾಧರನಲಿ ಇಂದಿಗು
ಮಿಲನದ ಚಿಹ್ನವು ತೋರದಿದೆ.

ಸಾಹಿತ್ಯ: ಅಂಬಿಕಾತನಯದತ್ತ

ಬೇಂದ್ರೆಯವರಿಗೆ ಇಡೀ ವಿಶ್ವಶಕ್ತಿಯೇ ಒಂದು ಅನಂತ ಪ್ರಣಯಗೀತೆ. ವೈಜ್ಞಾನಿಕವಾಗಿ ಉತ್ತರ ಧ್ರುವ ಮತ್ತು ದಕ್ಷಿಣ ಧ್ರುವಗಳ ನಡುವೆ ಒಂದು ಆಯಸ್ಕಾಂತಿಕ ಶಕ್ತಿ ಇದೆ. ಇದು ಬೇಂದ್ರೆ ಅವರಿಗೆ ಆಕರ್ಷಕ ಪ್ರಣಯ ಶಕ್ತಿಯಾಗಿ ಈ ಧ್ರುವಗಳ ನಡುವೆ ಚುಂಬಕ ಪ್ರಣಯಗಾಳಿಯು ಬೀಸುತ್ತಿದೆ. ಇವುಗಳ ಭಾಗವಾಗಿರುವ ಸೂರ್ಯ, ಭೂಮಿ, ಚಂದ್ರರ ನಡುವೆ ತ್ರಿಕೋಣ ಪ್ರೇಮವೇ ಇದೆ. ಈ ಪ್ರೇಮಕ್ಕೆ ಅಕ್ಷಿನಿಮೀಲನ ಮಾಡದ (ಅಂದರೆ ಕಣ್ಣುಮುಚ್ಚದೆ ಎವೆಯಿಕ್ಕಿ ನೋಡುವ) ದೇವತೆಗಳ ತೆರನಾದ ನಕ್ಷತ್ರಗಳನ್ನೇ ಬೇಂದ್ರೆ ಸಾಕ್ಷಿಯಾಗಿ ನಿಲ್ಲಿಸಿದ್ದಾರೆ.

ಚಿತ್ರ: ಶರಪಂಜರ
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ

Tag: Ananta Pranaya, Uttara Dhruvadim Dakshina Dhruvaku

ಕಾಮೆಂಟ್‌ಗಳಿಲ್ಲ: