ಸೋಮವಾರ, ಸೆಪ್ಟೆಂಬರ್ 2, 2013

ಬಾಳಾ ಠಾಕ್ರೆ

ಚಿರನಿದ್ರೆಗೆ ಜಾರಿದ ಮರಾಠಿ ಹುಲಿ ಬಾಳಾ ಠಾಕ್ರೆ

ಶಿವಸೇನೆ ಮುಖಂಡ,  ಮರಾಠಿ ಹೋರಾಟಗಾರ ಬಾಳಾ ಠಾಕ್ರೆ (86) ಅವರು ತಮ್ಮ ನಿವಾಸ 'ಮಾತೋಶ್ರೀ'ಯಲ್ಲಿ ಶನಿವಾರ ಮಧ್ಯಾಹ್ನ 3.30ರ ಸಮಯದಲ್ಲಿ ಅಸುನೀಗಿದ್ದಾರೆ.  ತೊಂಬತ್ತರ ದಶಕದಲ್ಲಿ ಮುಂಬೈನ ನನ್ನ ಒಬ್ಬ ಗೆಳೆಯರೊಬ್ಬರು  “ಬಾಳಾ   ಠಾಕ್ರೆ ಅವರಂತಹ ಒಬ್ಬರಿಲ್ಲದಿದ್ದರೆ ನಮ್ಮಂತಹವರು ಇಲ್ಲಿರುವುದು ಕಷ್ಟವಾಗುತ್ತಿತ್ತು” ಎಂದು ನುಡಿದಿದ್ದು ನೆನಪಾಗುತ್ತದೆ.  ಹಲವು ರೀತಿಯಲ್ಲಿ ವಿಭಿನ್ನ, ನಿಷ್ಠೂರ ನಿಲುವಿನ ಬಾಳಾ ಠಾಕ್ರೆ ಅವರು ನಮಗೆ ಎಲ್ಲ ರೀತಿಯಲ್ಲಿ ಒಪ್ಪಿಗೆಯಾಗುತ್ತಿರಲಿಲ್ಲ ಎಂಬುದು ನಿಜವಾದರೂ ಅವರ ಮೂಲ ಭಾರತೀಯ ಸಂಸ್ಕೃತಿಗಳ ಕುರಿತಾದ ಹಿತಚಿಂತನೆ ಹಾಗೂ ಅದಕ್ಕಾಗಿ ಅವರು ಕಾವಲು ನಿಂತ ರೀತಿ ಮರೆಯಲಾಗದ್ದು.  ಅಗಲಿದ ಚೇತನಕ್ಕೆ ನಮ್ಮ ಶ್ರದ್ದಾಂಜಲಿ.

Tag: Bala Thakare

ಕಾಮೆಂಟ್‌ಗಳಿಲ್ಲ: