ಶುಕ್ರವಾರ, ಸೆಪ್ಟೆಂಬರ್ 6, 2013

ಮೊದಲನೇ ದಿನವೇ ಒಲಿದೆ


ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿನುಡಿಗೆ

ನಿನ್ನ ನಡೆಗೆ ಸವಿ ನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೆ ಮೌನದಲೇ
ಮೊದಲನೇ ದಿನವೇ ಸೋತೆ  ನಿನ್ನ ನಡೆಗೆ ಸವಿನುಡಿಗೆ
ನಿನ್ನ ನಡೆಗೆ ಸವಿನುಡಿಗೆ

ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳಿನ ಲತೆಯಲಿ ಹೂವಾದೆ ಬಾಳಿನ ಕುಸುಮಕೆ ಜೇನಾದೆ
ಬಾಳ ಬಯಕೆಯು ನೀನಾದೆ ಬಾಳಿಗಾನಂದ ನಿ ತಂದೆ.

ಪ್ರೇಮದ ಕಡಲಲಿ ಮುತ್ತಾದೆ ಪ್ರೇಮದ ಬದುಕಿಗೆ ಕಣ್ಣಾದೆ
ಪ್ರೇಮಪಲ್ಲವಿ ನೀನಾದೆ ಪ್ರೇಮದಾನಂದ ನಿ ತಂದೆ
ಪ್ರೇಮದಾನಂದ ನಿ ತಂದೆ

ಈ ದಿನ ಹೊಸತನ ನಿ ತಂದೆ ನಾಳಿನ ಬದುಕಿಗೆ ಬೆಳಕಾದೆ
ಈ ದಿನ ಹೊಸತನ ನಿ ತಂದೆ ನಾಳಿನ ಬದುಕಿಗೆ ಬೆಳಕಾದೆ
ಪ್ರಾಣ ಪದಕವೇ ನೀನಾದೆ ನಾನು ನಿನ್ನಲ್ಲಿ ಒಂದಾದೆ

ಆಡುವ ಮಾತಿಗೆ ಧ್ವನಿಯಾದೆ ಹಾಡುವ ಗೀತೆಗೆ ಶ್ರುತಿಯಾದೆ
ಜೀವ ಜೀವವೇ ನೀನಾದೆ ನಿನ್ನ ಮನದಲ್ಲಿ ನಾನಾದೆ
ನಿನ್ನ ಮನದಲ್ಲಿ ನಾನಾದೆ
ಮೊದಲನೇ ದಿನವೇ ಒಲಿದೆ ನಿನ್ನ ನಡೆಗೆ ಸವಿನುಡಿಗೆ
ನಿನ್ನ ನಡೆಗೆ ಸವಿನುಡಿಗೆ
ಅನುರಾಗದಿ ಹಾಡಿದೆ ಕವಿತೆ ಕಂಗಳಲೆ ಮೌನದಲೇ
ಮೊದಲನೇ ದಿನವೇ ಸೋತೆ  ನಿನ್ನ ನಡೆಗೆ ಸವಿನುಡಿಗೆ
ನಿನ್ನ ನಡೆಗೆ ಸವಿನುಡಿಗೆ

ಚಿತ್ರ: ಪಾವನಗಂಗಾ
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಪಿ. ಬಾಲಸುಬ್ರಮಣ್ಯಂ ಮತ್ತು ಎಸ್. ಜಾನಕಿ
Tag: Modalane Dinave olideಕಾಮೆಂಟ್‌ಗಳಿಲ್ಲ: