ಮಂಗಳವಾರ, ಸೆಪ್ಟೆಂಬರ್ 3, 2013

ದಿವ್ಯಾ ರಾಘವನ್

ದಿವ್ಯಾ ರಾಘವನ್

ಕರ್ನಾಟಕದ ಗಾಯನ ಕ್ಷೇತ್ರದಲ್ಲಿನ ಯುವ ಪೀಳಿಗೆಯವರಲ್ಲಿ ದಿವ್ಯಾ ರಾಘವನ್ ಗಣನೀಯ ಪ್ರತಿಭೆ.  ಮೇ 10 ಅವರು ಜನ್ಮ ದಿನ.  ತಮ್ಮ ಐದನೆಯ ವಯಸ್ಸಿನಲ್ಲೇ ಸಂಗೀತ ಸಾಧನೆಯನ್ನಾರಂಭಿಸಿದ ದಿವ್ಯಾ ರಾಘವನ್ ಇಂದು ಶಾಸ್ತ್ರೀಯ ಸಂಗೀತವಲ್ಲದೆ, ಸುಗಮ ಸಂಗೀತ, ಭಕ್ತಿ ಸಂಗೀತ, ಜಾನಪದ, ಸಿನಿಮಾ ಸಂಗೀತ, ಘಜಲ್  ಹೀಗೆ ಎಲ್ಲೆಡೆ ವ್ಯಾಪಿಸಿದ್ದಾರೆ.  ಅವರ ಕಾರ್ಯಕ್ರಮಗಳು ವಿಶ್ವದೆಲ್ಲೆಡೆಯ ಹಲವಾರು ವೇದಿಕೆಗಳು, ದೂರದರ್ಶನಗಳಲ್ಲಿ ನಿರಂತರವಾಗಿ ನಡೆಯುತ್ತಿವೆ.  ‘ಜೀ ಟಿವಿ’ಯ 1999ರ ವರ್ಷದ ‘ಟಿವಿಎಸ್ ಸರಿಗಮಪಾ’ ಸ್ಪರ್ಧೆಗಳಲ್ಲಿ ಅವರು ಹಿರಿಯ ಮಟ್ಟದ ಸಾಧನೆ ಮಾಡಿದ್ದರು.    ಪ್ರಖ್ಯಾತ ಗಾಯಕರಾದ ಎಸ್ ಪಿ ಬಾಲಸುಬ್ರಮಣ್ಯಂ ಅವರೊಡನೆ ಎದೆ ತುಂಬಿ ಹಾಡುವೆನು ಕಾರ್ಯಕ್ರಮಗಳಲ್ಲಿ ಹಾಡಿದ್ದಾರೆ.  ಮನ್ನಾಡೆ ಅಂತಹ ಹಿರಿಯ ಕಲಾವಿದರ ತಂಡದ ಸದಸ್ಯೆಯಾಗಿ, ಮನ್ನಾಡೆ  ಅವರ ಸಹ ಗಾಯಕಿಯಾಗಿ ಸಂಗೀತಾಸಕ್ತರ ಗಮನ ಸೆಳೆದಿದ್ದಾರೆ. ಕನ್ನಡ, ಹಿಂದಿ, ತಮಿಳುಗಳಲ್ಲದೆ ಇತರ ಹಲವಾರು ಭಾಷೆಗಳಲ್ಲೂ ಹಾಡುತ್ತಾರೆ.  ಇವೆಲ್ಲಕ್ಕೂ ಮಿಗಿಲಾಗಿ ತಮ್ಮ ಗಾಯನ ಪ್ರತಿಭೆಯಿಂದ ಎಲ್ಲ ರೀತಿಯ ಸಂಗೀತ ರಸಿಕರ ಅಭಿಮಾನ ಪ್ರೋತ್ಸಾಹ ಗಳಿಸಿದ್ದಾರೆ.

ದಿವ್ಯಾ ರಾಘವನ್ ಅವರ ಸಾಧನೆ ನಿರಂತರವಾಗಿ ಉನ್ನತಿಗೇರುತ್ತಿರಲಿ.  ಅವರ ಬದುಕು ಸಂತಸಪೂರ್ಣವಾಗಿರಲಿ ಎಂದು ಹುಟ್ಟು ಹಬ್ಬದ ಶುಭಾಶಯಗಳನ್ನು ಹೇಳೋಣ.

Tag: Divya Raghavan

ಕಾಮೆಂಟ್‌ಗಳಿಲ್ಲ: