ಸೋಮವಾರ, ಸೆಪ್ಟೆಂಬರ್ 9, 2013

ರೀ ಗಣೇಶ ಇಟ್ಟಿದ್ದೀರಾ?

"ರೀ ಗಣೇಶ ಇಟ್ಟೀದೀರಾ!" ಅಂತ ಗಣೇಶ ಹಬ್ಬದ ದಿನ ಮನೆ ಮನೆಗೆ ಹೋಗಿ ಅಲ್ಲಿದ್ದ ಗಣೇಶನಿಗೆ ನಮಸ್ಕರಿಸಿ, ಏನಾದ್ರೂ ಪ್ರಸಾದ ಕೊಡ್ತಾರಾ ಅಂತ ಪಿಳಿ ಪಿಳಿ ಕಣ್ಬಿಟ್ಟು, ಕೊಟ್ರೆ ಡಬ್ಬಕ್ಕೇರಿಸಿ, ಕೊಡದಿದ್ರೆ ಓ ಇವರೂ ನಮ್ಮ ತರಾನೇ ಅಂತ ಸಮಾಧಾನ ಮಾಡ್ಕೊಂಡು, ಕಡೇ ಪಕ್ಷ ನೂರೆಂಟು ಗಣಪತಿ ನೋಡಿ, ಡಬ್ಬ ತುಂಬಿಸಿ, ಡಬ್ಬದಲ್ಲಿರುವುದೆಲ್ಲಾ ಹೊಟ್ಟೆ ತುಂಬಿದ ಮೇಲೆಯೇ ಮನೆಯಲ್ಲಿರುವ ಗಣಪತಿಗೆ 'ಸೀ ಯು ನೆಕ್ಸ್ಟ್ ಇಯರ್' ಅಂತ ಹೇಳಲಿಕ್ಕೆ ಬರ್ತಾ ಇದ್ದದ್ದು'.  ಇದನ್ನು ನೆನೆಸಿಕೊಂಡ್ರೆ ಒಂತರಾ ರೋಮಾಂಚನವಾಗ್ತಾ ಇದೆ.  ಈಗ ನೂರೆಂಟು ಮನೆಗೆ ಹೋಗಿ ಪ್ರಸಾದ ತಿನ್ನಲಿಕ್ಕೆ ಯೋಗವಿಲ್ಲ.  ನೂರೆಂಟು ಗಣಪತಿ ನೋಡಲಿಕ್ಕೇನು ಕಷ್ಟ.  ಅದಕ್ಕಾಗಿ ಈ ಆಲ್ಬಂನಲ್ಲಿ ನೂರೆಂಟು+ ಗಣೇಶರ ಯಾತ್ರೆ ಕೈಗೊಂಡಿದ್ದೇನೆ.  ಗಣೇಶಚಿಕ್ಕಂದಿನಲ್ಲಿ ನಿನ್ನ ಹುಡುಕಿ ಮನೆಮನೆಗೆ ಹೋದದ್ದು, ಪ್ರಸಾದ ತಿಂದದ್ದು ನೆನೆಪಾಗ್ತಾ ಇದೆ.  ಅದು ಕೇವಲ ನೆನಪು.  ಆದರೆ ನಿನ್ನ ವರಪ್ರಸಾದ ಮಾತ್ರ ನಮ್ಮ ಮೇಲೆ ನಿರಂತರವಾಗಿರಲಿ ತಂದೆ.  ಅದೆಷ್ಟೋ ಪರೀಕ್ಷೆಗಳನ್ನ ಓದದೆ ಪಾಸು ಮಾಡಲಿಕ್ಕೆ ಸಹಾಯ ಮಾಡಿದ್ದೀಯ.  ಜೀವನದಲ್ಲಿನ ಅನೇಕ ಪರೀಕ್ಷೆಗಳನ್ನು ಯೋಗ್ಯತೆ ಇಲ್ಲದಿದ್ದರೂ ಮೀರಿ ನಡೆಯೋಕೆ ಶಕ್ತಿ ಕೊಟ್ಟಿದ್ದೀಯ.  "ಇಷ್ಟು ದಿನ ಸಲಹಿರುವೆ ಈ ಮೂರ್ಖನನು ನೀನು, ಮುಂದೆಯೂ ಕೈ ಹಿಡಿದು ನಡೆಸದಿಹೆಯಾ, ಕಷ್ಟ ದಡವಿಯ ಕಳೆದು, ಬೆಟ್ಟ ಹೊಳೆಗಳ ಹಾದು ಇರುಳನ್ನು ನೂಕದಿಹೆಯಾ".  ಕರುಣಾಳು ನೀ ನಮ್ಮ ಕೈ ಹಿಡಿದು ಉತ್ತಮ ದಾರಿಯಲ್ಲಿ ನಡೆಸು.Tag: Ree Ganesha Ittiddeeraa?, Ganesha Festival


ಕಾಮೆಂಟ್‌ಗಳಿಲ್ಲ: