ಶುಕ್ರವಾರ, ಸೆಪ್ಟೆಂಬರ್ 6, 2013

ಅಪರಾಧಿ ನಾನಲ್ಲ

ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ

ನಿನ್ನಯ ಕೈಯಲ್ಲಿ ಬೊಂಬೆಯು ನಾನು,
ಆಡಿಸಿ ಬೀಳಿಸಿ ನಗುತಿಹೆ ನೀನು
ನನ್ನಯ ಸರಿ ತಪ್ಪು ಹೊಣೆ ನಿನ್ನದು
ಶೋಧನೆ ಈದಿನ ನನಗೆ ಅದು
ಪ್ರಭು ಶಿಕ್ಷೆ ನೀಡುವೆಯೊ ರಕ್ಷೆ ಮಾಡುವೆಯೊ
ಪಾಪ ಪುಣ್ಯ ನಿನಗೆ ಅರ್ಪಣೆಪ್ರಭು ಶಿಕ್ಷೆ ನೀಡುವೆಯೊ ರಕ್ಷೆ ಮಾಡುವೆಯೊ
ಪಾಪ ಪುಣ್ಯ ನಿನಗೆ ಅರ್ಪಣೆಪರಮಾತ್ಮನೆ ಶ್ರೀ ಕೃಷ್ಣನೆ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ

ಬೇಡದೆ ತಾಳಿಯ ನನಗೇ ನೀತಂದೇ,
ಜೀವಕು ಜೀವಕು ಹೊಸ ನಂಟು ತಂದೇ
ಕೀಳುವೆ ಏಕಿಂದು ಆ ಬಂಧನಾ
ಪ್ರೇಮಕೆ ಈ ಶಿಕ್ಷೆ ಏಕೀ ದಿನ
ಪ್ರಭು ಸ್ನೇಹ ಜೀವಿಯನು, ತ್ಯಾಗಮೂರ್ತಿಯನು
ಮಮತೆಯಿಂದ ಕಾಯೊ ತಂದೆಯೇ;
ನೀ ಎನ್ನ ತಪ್ಪುಗಳ ಕ್ಷಮಿಸಿ ಪಾಲಿಸುತ
ಜೀವ ನೀಡಿ ಸಲಹೊ ತಂದೆಯೇ
ರಾಘವೇಂದ್ರನೇ ಗುರುರಾಜನೇ...
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ

ನಿಶ್ಚಯ ಮನುಜಗೆ ಮರಣವು ಒಂದೇ
ಮನಸಿಗೆ ಶಾಂತಿಯು ಆಗಲೆ ತಂದೇ
ನಿಶ್ಚಲ ಮನಶಕ್ತಿ ದಯಪಾಲಿಸು
ಆದದೆ ಸ್ಥಳ ನೀಡಿ ಕೃಪೆ ತೋರಿಸು
ಪ್ರಭು ನಿನ್ನ ನಂಬಿರುವೆ
ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪ್ರಭು ನಿನ್ನ ನಂಬಿರುವೆ
ಶರಣು ಎಂದಿರುವೆ
ನಿನ್ನಲೆನ್ನ ಒಂದು ಮಾಡಿಕೊ
ಪರಮಾತ್ಮನೆ ಶ್ರೀ ಕೃಷ್ಣನೆ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ
ಕಪಟ ನಾಟಕ ಸೂತ್ರಧಾರಿ ನೀನೇ
ಅಪರಾಧಿ ನಾನಲ್ಲ ಅಪರಾಧ ಎನಗಿಲ್ಲಾ

ಚಿತ್ರ: ರಾಯರು ಬಂದರು ಮಾವನಮನೆಗೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜ್ ಕೋಟಿ
ಗಾಯನ: ಎಸ್. ಪಿ. ಬಾಲ ಸುಬ್ರಮಣ್ಯಮ್  ಮತ್ತು ಚಿತ್ರಾ

Tag: Aparaadhi naanalla aparaadha enagilla, aparadi naanalla

ಕಾಮೆಂಟ್‌ಗಳಿಲ್ಲ: