ಬುಧವಾರ, ಸೆಪ್ಟೆಂಬರ್ 4, 2013

ವೆಂಕಟರಮಣನೆ ಬಾರೋ


ವೆಂಕಟರಮಣನೆ ಬಾರೋ ಶೇಷಾಚಲವಾಸನೆ ಬಾರೋ 
ಪಂಕಜನಾಭ ಪರಮ ಪವಿತ್ರ ಶಂಕರ ಮಿತ್ರನೇ ಬಾರೋ

ಮುದ್ದು ಮುಖದ ಮಗುವೆ ನಿನಗೆ ಮುತ್ತು ಕೊಡುವೆನು ಬಾರೋ 
ನಿರ್ದಯವೇಕೋ ನಿನ್ನೊಳಗೆ ನಾನು ಪೊಂದಿದ್ದೇನು ಬಾರೋ  

ಮಂದರ ಗಿರಿಯನೆತ್ತಿದ ಆನಂದ ಮೂರ್ತಿಯೇ ಬಾರೋ 
ನಂದನ ಕಂದ ಗೋವಿಂದ ಮುಕುಂದ ಇಂದಿರೆಯರಸನೆ ಬಾರೋ 
ಕಾಮನಯ್ಯ ಕರುಣಾಳು ಶ್ಯಾಮಲ ವರ್ಣನೆ ಬಾರೋ
ಕೋಮಲಾಂಗ ಶ್ರೀಪುರಂದರ ವಿಠ್ಠಲನೆ ಸ್ವಾಮಿರಾಯನೆ ಬಾರೋ

ಸಾಹಿತ್ಯ: ಪುರಂದರದಾಸರು

Tag: Venkataramanane baro sheshachalavaasane baro

ಕಾಮೆಂಟ್‌ಗಳಿಲ್ಲ: