ಶನಿವಾರ, ಸೆಪ್ಟೆಂಬರ್ 7, 2013

ನೂರು ಜನ್ಮಕು ನೂರಾರು ಜನ್ಮಕು

ನೂರು ಜನ್ಮಕು ನೂರಾರು ಜನ್ಮಕು
ಒಲವ ಧಾರೆಯೆ, ಒಲಿದೊಲಿದು ಬಾರೆಲೆ
ನನ್ನ ಆತ್ಮ ನನ್ನ ಪ್ರಾಣ ನೀನೆ ಎಂದೂ

ಬಾಳೆಂದರೆ ಪ್ರಣಯಾನುಭಾವ ಕವಿತೆ
ಆತ್ಮಾನುಸಂಧಾನ
ನೆನಪೆಂದರೆ ಮಳೆಬಿಲ್ಲ ಛಾಯೆ
ನನ್ನೆದೆಯ ಬಾಂದಳದಿ
ಚಿತ್ತಾರ ಬರೆದವಳೆ
ಸುತ್ತೇಳು ಲೋಕದಲಿ
ಮತ್ತೆಲ್ಲು ಸಿಗದವಳೆ
ನನ್ನೊಳಗೆ ಹಾಡಾಗಿ ಹರಿದವಳೆ

ಬಾ ಸಂಪಿಗೆ ಸವಿಭಾವ ಲಹರಿ
ಹರಿಯೆ ಪನ್ನೀರ ಜೀವನದಿ
ಬಾ ಮಲ್ಲಿಗೆ ಮಮಕಾರ ಮಾಯೆ
ಲೋಕದ ಸುಖವೆಲ್ಲ
ನಿನಗಾಗಿ ಮುಡಿಪಿರಲಿ
ಇರುವಂಥ ನೂರುಕಹಿ
ಇರಲಿರಲಿ ನನಗಾಗಿ
ಕಾಯುವೆನು ಕೊನೆವರೆಗು ಕಣ್ಣಾಗಿ

ಚಿತ್ರ: ಅಮೆರಿಕ ಅಮೆರಿಕ
ರಚನೆ: ನಾಗತಿಹಳ್ಳಿ ಚಂದ್ರಶೇಖರ
ಸಂಗೀತ: ಮನೋ ಮೂರ್ತಿ
ಗಾಯನ: ರಾಜೇಶ್ ಕೃಷ್ಣನ್

Tag: nuru janmaku nuraru janmaku, nooru jnamaku nooraru janmaku

ಕಾಮೆಂಟ್‌ಗಳಿಲ್ಲ: