ಭಾನುವಾರ, ಸೆಪ್ಟೆಂಬರ್ 8, 2013

ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ


ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ

ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ
ನಿನ್ನ ತುಂಟ ಹೂನಗೆಯಲ್ಲಿ, ಏನೊ ಏನೊ ಭಾವ 
ನಗೆಯು ತಂದ ಮೋಡಿಯಲ್ಲಿ, ನಲಿಯಿತೆನ್ನ ಜೀವ
ನಿನ್ನ ತುಂಟ ಹೂನಗೆಯಲ್ಲಿ

ಗಾನ ಹಕ್ಕಿ ಹಾಡೊ ವೇಳೆ
ಉದಯ ರವಿಯು ಮೂಡುವ ವೇಳೆ 
ಗಾನ ಹಕ್ಕಿ ಹಾಡೊ ವೇಳೆ
ಉದಯ ರವಿಯು ಮೂಡುವ ವೇಳೆ 
ನೀನು ಬರುವ ದಾರಿಯಲ್ಲಿ ಹೃದಯ ಹಾಸಿ ನಿಲ್ಲುವೆ
ಮರದ ನೆರಳ ತಂಪಿನಲ್ಲಿ
ನಿನ್ನ ಮಡಿಲ ಹಾಸಿಗೆಯಲ್ಲಿ
ತಲೆಯನಿಟ್ಟು ಮಲಗಿರುವಾಗ, ಸ್ವರ್ಗ ಅಲ್ಲೆ ಕಾಣುವೆ
ನನ್ನ ಮನವ ಆಳ ಬಂದ ನನ್ನವನೆ ಚೆನ್ನಿಗನೆ
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ
ಕಣ್ಣ ಮಿಂಚು ನೋಟದಲ್ಲಿ, ಕಂಡೆ ಪ್ರೇಮ ದೀಪ
ನಿನ್ನ ಕಣ್ಣ ಕನ್ನಡಿಯಲ್ಲಿ

ಹಸಿರು ಎಲೆಯ ಸೀರೆ ಧರಿಸಿ
ಹೂವ ತಿಲಕ ಹಣೆಯಲಿ ಇರಿಸಿ
ಹಸಿರು ಎಲೆಯ ಸೀರೆ ಧರಿಸಿ
ಹೂವ ತಿಲಕ ಹಣೆಯಲಿ ಇರಿಸಿ
ಒಲಿದು ಬಂದ ವನದೇವತೆಯೊ, ಸೊಬಗು ಏನ ಹೇಳಲಿ
ಹೂವ ಸಂಗ ಕೂಡಿಯಾಡಿ
ಕಂಪು ಕದ್ದು ಮೆಲ್ಲನೆ ಓಡಿ
ತೂಗಿ ಬಂದ ಗಾಳಿಯಂತೆ ಬಂದೆ ನನ್ನ ಬಾಳಲಿ
ನಿನ್ನ ಚೆಲುವು ನೋಡಿ ನೋಡಿ, ಮೈ ಮರೆತೆ ಮನ ಸೋತೆ
ನಿನ್ನ ತುಂಟ ಹೂನಗೆಯಲ್ಲಿ, ಏನೊ ಏನೊ ಭಾವ
ನಗೆಯು ತಂದ ಮೋಡಿಯಲ್ಲಿ, ನಲಿಯಿತೆನ್ನ ಜೀವ
ನಿನ್ನ ಕಣ್ಣ ಕನ್ನಡಿಯಲ್ಲಿ, ಕಂಡೆ ನನ್ನ ರೂಪ

ಚಿತ್ರ: ಸ್ವಯಂವರ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಪಿ. ಸುಶೀಲ


Tag: Ninna Kanna Kannadiyalli

ಕಾಮೆಂಟ್‌ಗಳಿಲ್ಲ: