ಶುಕ್ರವಾರ, ಸೆಪ್ಟೆಂಬರ್ 6, 2013

ಸಿಂಗಾರ ಶೀಲ ಸಂಗೀತಲೋಲ

ಸಿಂಗಾರ ಶೀಲ ಸಂಗೀತಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯ ನಾನಯ್ಯ

ಸರಸ ಸಮ್ಮಾನ ಸಂತೋಷ ಭಾವ
ಶರಧಿಯಂತಾಗಿ ತುಂಬಿತೋ ಜೀವ
ಹರಿಯೇ ಕರೆವೇ, ಈ ನಿನ್ನ ಮಾಯೆ
ಏನೆಂದು ಹೇಳಲಯ್ಯಾ ಧೀನಬಂಧು ನೀನಯ್ಯಾ
ಸಿಂಗಾರ ಶೀಲ ಸಂಗೀತಲೋಲ

ಕವಿದ ಗಾಢಾಂಧಕಾರವ ನೀಗಿ
ಬೆಳಕ ನೀತಂದೆ ನನ್ನವನಾಗಿ
ಒಲಿವೇ ನಲಿವೇ ನನ್ನಯ ತಂದೆ
ಕಾಪಾಡೋ ಕಾಮಧೇನು ನೀನೆ ಎಂದು ತೋರಿದೆ
ಸಿಂಗಾರ ಶೀಲ ಸಂಗೀತಲೋಲ

ಮನದೊಳೇಕಿಂತ ವೀಣೆ
ಮಧುರ ಝೇಂಕಾರ ತಂದಿತೊ ಕಾಣೆ
ಕುಣಿವೇ ತಣಿವೇ ಸೇವೆಯ ಗೈವೆ
ಶ್ರೀರಂಗ ನಿನ್ನ ಲೀಲೆ ಹಾಡಿ ಹಾಡಿ ಬಾಳುವೆ
ಸಿಂಗಾರ ಶೀಲ ಸಂಗೀತಲೋಲ
ಶ್ರೀರಂಗ ನಿನ್ನ ಲೀಲೆ ಕಂಡು ಧನ್ಯ ನಾನಯ್ಯ
ಸಿಂಗಾರ ಶೀಲ ಸಂಗೀತಲೋಲ

ಸಾಹಿತ್ಯ ಹುಣಸೂರು ಕೃಷ್ಣಮೂರ್ತಿ
ಸಂಗೀತ: ಎಂ. ವೆಂಕಟರಾಜು
ಗಾಯನ: ಎಸ್. ಜಾನಕಿ ಮತ್ತು ಪಿ. ಬಿ. ಶ್ರೀನಿವಾಸ್ 


Tag: Singara Sheela sangeeta lola

ಕಾಮೆಂಟ್‌ಗಳಿಲ್ಲ: