ಶುಕ್ರವಾರ, ಸೆಪ್ಟೆಂಬರ್ 6, 2013

ನಿನ್ನಂಥ ಅಪ್ಪ ಇಲ್ಲಾ

ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು

ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನಿನ್ನ ಕಂಡ ಮೇಲೆ ಬೆಳಕ ಕಂಡೆ ಬಾಲೆ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ

ನೀ ಹೀಗೇ ನಡೆಯಲು ನಡು ಹೀಗೇ ಕುಣಿಯಲು
ಹದಿನೆಂಟು ವಯಸಿನ ಹುಡುಗನ ಹಾಗಿದೆ
ನೀ ಹೀಗೆ ನಗುತಿರೆ ಜೊತೆಯಾಗಿ ಬರುತಿರೆ
ಆನಂದ ತರುತಿರೆ ಹುಡುಗನೇ ಎಂದಿಗೂ
ರಂಪಂ ರಪಂಪ ರಂಪ ಪಂಪ
ರಂಪಂ ರಪಂಪ ರಂಪ ಪಂಪ
ಮಾತಿನಾ ಮೋಡಿಗೆ ನಿನ್ನಾಣೆ ನಾನು ಮೆಚ್ಚಿದೆ
ನಿನ್ನಂಥ ಮಗಳು ಇಲ್ಲಾ
ನಿನ್ನಂಥ ಅಪ್ಪ ಇಲ್ಲಾ

ಸಂತೋಷವೆಂದರೆ ಉಲ್ಲಾಸವೆಂದರೆ
ಸಂಗೀತವೆಂದರೆ ನಿನ್ನ ಜೊತೆ ನಡೆದರೆ
ಮುದ್ಡಾದ ಮಾತನು ಹಿತವಾದ ರಾಗದಿ
ದಿನವೆಲ್ಲ ಆಡಲು ಹೇಗೆನೀ ಅರಿತೆಯೋ
ರಂಪಂ ರಪಂಪ ರಂಪ ಪಂಪ
ರಂಪಂ ರಪಂಪ ರಂಪ ಪಂಪ
ನನ್ನ ಈ ಅರಗಿಣಿ ಮಾತಾಡೇ ನೋಡಿ ಕಲಿತೆನು
ನಿನ್ನಂಥ ಅಪ್ಪ ಇಲ್ಲಾ ಒಂದೊಂದು ಮಾತು ಬೆಲ್ಲ
ನಿನ್ನಂಥ ಮಗಳು ಇಲ್ಲಾ ಬಾಳಲ್ಲಿ ನೀನೇ ಎಲ್ಲಾ
ನೀನೇ ನನ್ನ ಜೀವ ನೀನೇ ನನ್ನ ಪ್ರಾಣ
ಯಾವ ದೇವ ತಂದ ವರವೋ ಇನ್ನು ನಾನು ಅರಿಯೆನು
ನಿನ್ನಂಥ ಅಪ್ಪ ಇಲ್ಲಾ
ನಿನ್ನಂಥ ಮಗಳು ಇಲ್ಲಾ

ಚಿತ್ರ: ದೇವತಾ ಮನುಷ್ಯ
ಸಾಹಿತ್ಯ: ಚಿ, ಉದಯಶಂಕರ್
ಗಾಯನ: ರಾಜ್ ಕುಮಾರ್ ಮತ್ತು ಬಿ ಆರ್ ಛಾಯಾ
ಸಗೀತ: ಉಪೇಂದ್ರಕುಮಾರ್

Tag: Ninnantha appa illa ninnantha magalu illa, ninnanta appa illa, ninnanta magalu illaಕಾಮೆಂಟ್‌ಗಳಿಲ್ಲ: