ಬುಧವಾರ, ಅಕ್ಟೋಬರ್ 16, 2013

ನಾನೇ ಭಾಗ್ಯವತಿ, ಇಂದು ನಾನೇ ಪುಣ್ಯವತಿ

ನಾನೇ ಭಾಗ್ಯವತೀ, ಇಂದು ನಾನೇ ಪುಣ್ಯವತೀ,
ಗೋವಿಂದ ನಿನ್ನಿಂದ ಆನಂದ ಹೊಂದಿರುವ
ನಾನೇ ಭಾಗ್ಯವತಿ

ಹರಿನಾಮ ಹರಿಧ್ಯಾನ ಹರಿಸೇವೆಯಿಂದ
ನಾ ಧನ್ಯಳಾದೆ, ಬಲು ಮಾನ್ಯಳಾದೆ,
ದೇವಾದಿ ದೇವನ ದಯೆಯಿಂದ
ಭೂಲೋಕ ಪೂಜಿಸುವ ಸಿರಿದೇವಿಯಾದ
ನಾನೇ ಭಾಗ್ಯವತಿ

ಪಾಲ್ಗಡಲ ಕಡೆವಾಗ ನೀ ಜನಿಸಿದಂತೆ,
ನಾ ನಿನ್ನ ಕಂಡೆ ಬಲು ಮೋಹಗೊಂಡೆ,
ಪ್ರೇಮಾನುರಾಗದೆ ಕೈ ಹಿಡಿದೇ,
ನಿನ್ನನ್ನು ಪಡೆದು ಪರಿಪೂರ್ಣನಾದ
ನಾನೇ ಭಾಗ್ಯವಂತ,
ಊ ಹ್ಞೂ, ನಾನೇ ಭಾಗ್ಯವತಿ

ಕ್ಷಣಕಾಲ ದೂರಾಗಿ ಇರಲಾರೆನೆಂದೂ
ನಿನ್ನಲ್ಲೇ ಬೆರೆತು ನನ್ನನ್ನೇ ಮರೆತು
ಮನೆ ಮಾಡಿ ಹೃದಯದಲಿ ಮುದದಿಂದ
ಶ್ರೀಪತಿಗೆ ಅನುಗಾಲ ಆನಂದ ತಂದ
ನಾನೇ ಭಾಗ್ಯವತೀ, ಇಂದು ನಾನೇ ಪುಣ್ಯವತೀ,
ಗೋವಿಂದ ನಿನ್ನಿಂದ ಆನಂದ ಹೊಂದಿರುವ
ನಾನೇ ಭಾಗ್ಯವತೀ, ಇಂದು ನಾನೇ ಪುಣ್ಯವತೀ,

ಚಿತ್ರ: ಶ್ರೀನಿವಾಸ ಕಲ್ಯಾಣ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ರಾಜನ್ ನಾಗೇಂದ್ರ
ಗಾಯನ: ಎಸ್. ಜಾನಕಿ ಮತ್ತು ರಾಜ್ ಕುಮಾರ್