ಶುಕ್ರವಾರ, ಅಕ್ಟೋಬರ್ 25, 2013

ಗುರುದೈವ ಜನನಿ


ಮಾಡಬಾರದ ಮಾಡಿ, ಆಗಬಾರದು ಆಗಿ
ಬಾಳೆಲ್ಲ ಬರಿದಾಗಿ,  ಗೋಳೊಂದೆ ಉಳಿದಾಗ
ಅಂತರಾಳದಿ ಬೆಳಗಿ, ಸಂತಸವ ಕರುಣಿಸಿಹೆ
“ಏಳು ಮಗು, ನಾನಿಹೆನು!” ಎನ್ನುತ್ತ ಕರೆದೆ.

ಅವರಿವರ ಉಪದೇಶ ಬರಿಯ ಬಾಯ್ಮಾತಾಗಿ
ರವಿರಹಿತ ಕತ್ತಲೆಯೆ ಎತ್ತೆತ್ತ ಕವಿದಾಗ
ಕರುಣಿಸಿಹೆ ಓ ತಾಯಿ, ತವ ಚರಣದಾಶ್ರಯವ
“ಬಾ ಕಂದ, ಇಹೆ ನಾನು, ಕುಂದದಿರು” ಎಂದು

ಜಗವೆಲ್ಲ ಕೈಬಿಟ್ಟು ಮತಿಗೆಟ್ಟು, ಗತಿಗೆಟ್ಟು,
ಆವುದನು ಗೈಯಲೂ ತ್ರಾಣವಿಲ್ಲದ ಎನಗೆ
“ನಾನು ಸಾಧನೆ ಸಿದ್ಧಿ ಗತಿ ಆಸರೆಯು ನಿನಗೆ”
ಎನ್ನುತ್ತ ವರವಿತ್ತ ಗುರು-ದೈವ-ಜನನಿ

ಸಾಹಿತ್ಯ: ಸ್ವಾಮಿ ಶಾಸ್ತ್ರಾನಂದ

Tag: Maadabaarada Maadi

ಕಾಮೆಂಟ್‌ಗಳಿಲ್ಲ: