ಸೋಮವಾರ, ಅಕ್ಟೋಬರ್ 28, 2013

ಬಾಳಿಗೊಂದು ಬಯಕೆ ಆಸರೆ

ಬಾಳಿಗೊಂದು ಬಯಕೆ ಆಸರೆ
ಬಯಕೆ ತುಂಬಲು ಮನವೂ ಆಸರೆ
ಮನದ ಮನವೂ ನೀನೇ ಆಗಿರೆ
ನೀನೇ ನನಗೆ ಆಸರೆ, ಆಸರೇ....

ಕಡಲಿನ ಆಸರೆ, ಪಡೆಯಲು ಆಶಿಸಿ
ಈ ನದಿ ಓಡುತಿದೇ
ಇಳಿಜಾರಿನಲ್ಲಿ ಪರಿಮಳ ಬಯಸಿ
ವೇಗದಿ ಜಾರುತಿದೆ
ಪಯಣದ ಹಾದಿಯ ಸೊಬಗನು ಕಾಣುವ
ಯೋಗವ ಮರೆಯುತಿದೆ,
ಯೋಗವ ಮರೆಯುತಿದೇ.... 

ಭುವಿಯನು ಪ್ರೀತಿಸಿ ಮುದ್ದಿಸಲಾಶಿಸಿ
ಬಾಗುತಿದೇ ಭಾನು
ಆಗಸ ಭೂಮಿಯ ಅಂತರ ಅಳೆದ
ಜಾಣನು ಎಲ್ಲಿಹನೋ
ಎರಡೂ ಸೇರಿದೆ ಎನುವುದು ಭ್ರಮೆಯೂ
ನಂಬದಿರು ಕಣ್ಣು, ನಂಬದಿರೂ ಕಣ್ಣೂs

ಚಿತ್ರ: ಎರಡುಮುಖ
ಸಾಹಿತ್ಯ: ಚಿ. ಉದಯಶಂಕರ್
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್, ಪಿ. ಸುಶೀಲ


Tag: Baligondu bayake aasare


ಕಾಮೆಂಟ್‌ಗಳಿಲ್ಲ: