ಬುಧವಾರ, ಅಕ್ಟೋಬರ್ 30, 2013

ಬೆಳದಿಂಗಳಿನ ನೊರೆ ಹಾಲು

ಬೆಳದಿಂಗಳಿನ ನೊರೆ ಹಾಲು
ಕೊಡದಲಿ ತುಂಬಿ ತಂದವಳೆ,
ಹೊಳೆಯುವ ತಾರೆಯ ಹೊಂಬೆಳಕು
ಕಣ್ಣಲಿ ಸೂಸಿ ನಿಂದವಳೆ,
ಬಾ ಬಾರೇ,
ಬಾ ಬಾರೇ ಓ ಗೆಳತೀ,
ಜೀವನ ಸಂಗಾತಿ

ಮಲ್ಲಿಗೆ ಹಂಬಿನ ತೋಟದಲಿ
ತಂಬೆಲರಂತೆ ಬಂದವನೆ,
ಅರಿಯದ ಹೆಣ್ಣಿನ ಹೃದಯದಲಿ
ಸುಮಧುರ ನೋವನು ತಂದವನೆ
ಬಾ ಬಾರಾ,
ಬಾ ಬಾರಾ, ಓ ಗೆಳೆಯಾ,
ಜೀವನ ಸಂಗಾತಿ

ವಸಂತಕಾಲದ ಪ್ರಥಮ ಕುಸುಮವೋ
ಪ್ರೇಮ ಪಲ್ಲವಿಯೋ,
ಅನುರಾಗಾಮೃತ ಧರೆಯಲಿ ನಿಂದ
ಚೆಲುವ ಚೆನ್ನಿಗನೋ;
ಹೂವಿನ ತೇರಲಿ ಮೆರೆಯುತ ಬಂದ
ದೇವ ಕನ್ನಿಕೆಯೋ;
ಮಲ್ಲಿಗೆ ಹಂಬಿನ ತೋಟದಲಿ
ತಂಬೆಲರಂತೆ ಬಂದವನೆ.

ಆಸೆಗಳೆಂಬ ಕಾರಂಜಿಗಳು
ಹೊಮ್ಮುವ ನಂದನವೋ;
ನಿನ್ನ ಕಿರುನಗೆಯೆಂಬ ಹೂವುಗಳಿಂದ
ಮೆರೆಯುವ ಹೂಬನವೋ;
ಪ್ರಣಯಿಗಳ ಮಧುರ ವಿಹಾರದ
ಪ್ರೇಮಕಾಶ್ಮೀರವೋ;
ಬೆಳದಿಂಗಳಿನ ನೊರೆ ಹಾಲು
ಕೊಡದಲಿ ತುಂಬಿ ತಂದವಳೆ
ಅರಿಯದ ಹೆಣ್ಣಿನ ಹೃದಯದಲಿ
ಸುಮಧುರ ನೋವನು ತಂದವನೆ
ಬಾ ಬಾರೇ, ಬಾ ಬಾರಾ
ಓ ಗೆಳೆಯಾ, ಜೀವನ ಸಂಗಾತಿ

ಚಿತ್ರ: ನಾ ಮೆಚ್ಚಿದ ಹುಡುಗ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ವಿಜಯಭಾಸ್ಕರ್
ಗಾಯನ: ಪಿ. ಬಿ. ಶ್ರೀನಿವಾಸ್, ಎಸ್. ಜಾನಕಿ


Tag: Beladingalina Nore haalu

ಕಾಮೆಂಟ್‌ಗಳಿಲ್ಲ: