ಸೋಮವಾರ, ಅಕ್ಟೋಬರ್ 7, 2013

ಹದಿನಾಲ್ಕು ವರ್ಷ ವನವಾಸದಿಂದ

ಹದಿನಾಲ್ಕು ವರ್ಷ ವನವಾಸದಿಂದ
 ಮರಳಿ ಬಂದಳು ಸೀತೇ,
ಮರಳಿ ಬಂದಳು ಸೀತೆ
ಸಾರ್ವಭೌಮ ಶ್ರೀರಾಮಚಂದ್ರನ
ಪ್ರೇಮದ ಆಸರೆ ಒಂದೇ
ಸಾಕೆಂದಳು ಆ ಮಾತೆ.......

ಅಗ್ನಿಪರೀಕ್ಷೆಯ ಸತ್ವ ಪರೀಕ್ಷೆಗೆ
ಗುರಿಯಾದಳು ಸೀತೆ
ಅಗ್ನಿಯು ದಹಿಸದೆ ಘೋಷಿಸಿದ
"ಸೀತೆ ಪುನೀತೆ, ಸೀತೆ ಪುನೀತೆ".
ಅಲ್ಪಾಗಸನ ಕಲ್ಪನೆಮಾತಿಗೆ
ಅಳುಕಿದ ಶ್ರೀರಾಮ
"ಸೀತೆ ಕಲುಷಿತೆ, ಸೀತೆ ದೂಷಿತೆ"
ಎಂದನೆ ರಾಜಾರಾಮಾ...
ಮತ್ತೆ ಸೀತೆಯ ಕಾಡಿಗಟ್ಟಿದ
ನ್ಯಾಯವಾದಿ ರಾಮಾ....

ಪೂರ್ಣ ಗರ್ಭಿಣಿ ಪುಣ್ಯರೂಪಿಣಿಯ
ಕಂಡನು ವಾಲ್ಮೀಕಿ
ಲೋಕಮಾತೆಗೆ ಶೋಕ ಸಾಗರವೆ
ನಿರ್ದಯಿ ರಾಮಾ, ನಿರ್ದಯಿ ರಾಮಾ
ಪರ್ಣಕುಟೀರದೆ ಲವಕುಶ ಜನನ
ಸೀತೆಗೆ ಶಾಂತಿನಿಕೇತನ
"ಪರಮಪಾವನೇ, ಪ್ರಾಣವಲ್ಲಭೇ"
ಎನ್ನುತ ರಾಮನ ಆಗಮನಾ
ಸಂಗಮ ಸಮಯದೆ ಭೂಕಂಪನ
ಚಿರವಿರಹವೆ ಜಾನಕಿ ಜೀವನ!

ಚಿತ್ರ: ಶರಪಂಜರ
ಸಾಹಿತ್ಯ : ವಿಜಯನಾರಸಿಂಹ 
ಸಂಗೀತ : ವಿಜಯಭಾಸ್ಕರ್ 
ಗಾಯನ : ಪಿ.ಸುಶೀಲ


Tag: Hadinalku Varsha Vanavaasadindaಕಾಮೆಂಟ್‌ಗಳಿಲ್ಲ: