ಭಾನುವಾರ, ಅಕ್ಟೋಬರ್ 27, 2013

ಚೆಲುವಯ್ಯ ಚೆಲ್ವೋ ತಾನಿ ತಂದನಾ

ಚೆಲ್ವಯ್ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ಬೆಟ್ಟದ ಮ್ಯಾಗಲ ಜಲ್ಲೆ ಬಿದಿರು
ಬೇಲಿ ಮ್ಯಾಗಲ ಸೋರೆ ಬುರುಡೆ
ಲೋಲು ಕಿನ್ನರಿ ಮುತ್ತೊನ್ ಯಾರಯ್ಯಾ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ಬೋರು ಕಿನ್ನಡಿ ನುಡಿಸುತ್ತಾನೆ
ಕೇರಿ ಕೇರಿ ತಿರುಗುತ್ತಾನೆ
ನಮ್ಮ ಕೇರಿಗ್ಯಾಕೆ ಬರುವಲ್ಯೊ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ನಮ್ಮ ಕೇರಿಗ್ ಬಂದರೀಗ
ಕರಿಯ ಕಂಬ್ಳೀ ಗದ್ಗನ್  ಹೂಡಿ
ತಂದು ಕೊಡುವೇನ್ ಗಂಧ ವೀಳ್ಯವ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ಗಂಧನಾದ್ರೂ ಧರಿಸಿಕೊಳ್ಳಿ
ವೀಳ್ಯನಾದ್ರೂ ಮೆತ್ತಿಕೊಳ್ಳಿ
ಬಂದ ಕಾರ್ಯ ಹೇಳಿ ದಮ್ಮಯ್ಯ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ಬಂದ ಕಾರ್ಯ ಹೇಳುವುದಕ್ಕೆ
ಮಂತ್ರಿ ಪ್ರಧಾನಿ ಬೇಕು
ಹಾರ ತುರಾಯಿಗಳೆಲ್ಲೇ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ಆಗದೋನೆ ಭೋಗದೋನೆ
ನಾಗ ನಡು ಕಟ್ಟಿನೋನೆ
ಕೋಗಿಲ್ಹಾಂಗೆ ಕೂಗುತ್ತೀಯಲ್ಲೋ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ಎತ್ತಿಗಂತ ನೀನು ಬಾರೆ
ಎಮ್ಮೆಗಂತ ನಾನು ಬತ್ತೀನ್
ಕುಂತು ನಿಂತು ಮಾತನಾಡಾನ....  
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ

ನೀರಿಗಂತ ನೀನು ಬಾರೋ
ನೀರಿಗಂತ ನಾನೂ ಬತ್ತೀನ್
ದೂರ ನಿಂತು ಮಾತನಾಡಾನಾ...
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ
ಚೆಲ್ವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ
ಚೆಲುವಯ್ಯ ಚೆಲ್ವೋ ತಾನಿ ತಂದನಾ
ಚಿನ್ಮಾಯಾರುಪೇ ಕೋಲಣ್ಣ ಕೋಲೆ
ತಯ್ಯೋ ತಜ್ಜಣ್ಣ ತಾ...

ಚಿತ್ರ: ಮಹಾಕವಿ ಕಾಳಿದಾಸ
ಸಾಹಿತ್ಯ: ಜಾನಪದ
ಸಂಗೀತ: ಹೊನ್ನಪ್ಪ ಭಾಗವತರ್
ಗಾಯನ ಮತ್ತು ನಟನೆ: ಹೊನ್ನಪ್ಪ ಭಾಗವತರ್ ಮತ್ತು ಸಂಗಡಿಗರು ಕಾಮೆಂಟ್‌ಗಳಿಲ್ಲ: