ಮಂಗಳವಾರ, ಅಕ್ಟೋಬರ್ 1, 2013

ಪವಮಾನ ಜಗದ ಪ್ರಾಣ


ಪವಮಾನ ಪವಮಾನ ಜಗದ ಪ್ರಾಣಾ ಸಂಕರುಷಣಾ
ಭವಭಯಾರಣ್ಯ ದಹನಾ 

ಶ್ರವಣವೆ ಮೊದಲಾದ ನವವಿಧ ಭಕುತಿಯ

ತವಕದಿಂದಲಿ ಕೊಡು ಕವಿಜನ ಪ್ರೀಯಾ 

ಹೇಮಕಚ್ಛುಟ ಉಪವೀತಧರಿತ ಮಾರುತಾ
ಕಾಮಾದಿ ವರ್ಗರಹಿತಾ

ವ್ಯೂಮಾದಿ ಸಕಲ ವ್ಯಾಪುತಾ ಸತತ ನಿರ್ಭೀತಾ

ರಾಮಚಂದ್ರನ ನಿಜ ದೂತಾ

ಯಾಮಯಾಮಕೆ ನಿನ್ನಾರಾಧಿಪುದಕೆ

ಕಾಮಿಪೆ ಎನಗಿದು ನೇಮಿಸಿ ಪ್ರತಿದಿನ ಈ
ಮನಸಿಗೆ ಸುಖಸ್ತೋಮವ ತೋರುತ
ಪಾಮರ ಮತಿಯನು ನೀ ಮಾಣಿಪುದು 

ವಜ್ರಶರೀರ ಗಂಭೀರ ಮುಕುಟಧರ

ದುರ್ಜನವನ ಕುಠಾರ ನಿರ್ಜರ ಮಣಿದಯಾ

ಪಾರಾವಾರಾ ಉದಾರಾ ಸಜ್ಜನರಘ ಪರಿಹಾರಾ

ಅರ್ಜುನಗೊಲಿದಂದು ಧ್ವಜವಾಗಿ ನೀ ನಿಂದು

ಮೂರ್ಜಗ ಬಿರಿವಂತೆ ಗರ್ಜನೆ ಮಾಡಿದಿ

ಹೆಜ್ಜೆ ಹೆಜ್ಜೆಗೆ ನಿನ್ನಬ್ಜ ಪದಧೂಳಿ
ಮೂರ್ಜಗದಲಿ ಭವವರ್ಜಿತನೆನಿಸು 

ಪ್ರಾಣ, ಅಪಾನ, ವ್ಯಾನೋದಾನ ಸಮಾನ

ಆನಂದ ಭಾರತೀರಮಣ ನೀನೆ ಶರ್ವಾದಿ

ಗೀರ್ವಾಣಾದ್ಯಮರರಿಗೆ ಜ್ಞಾನಧನ

ಪಾಲಿಪ ವರೇಣ್ಯ ನಾನು ನಿರುತದಲಿ

ಏನೆಸಗುವೆ ಮಾನಸಾದಿ ಕರ್ಮ ನಿನಗೊಪ್ಪಿಸಿದೆನೋ

ಪ್ರಾಣನಾಥ ಶ್ರೀವಿಜಯವಿಠ್ಠಲ
ಕಾಣಿಸಿ ಕೊಡುವುದು ಭಾನುಪ್ರಕಾಶಾ


ಸಾಹಿತ್ಯ: ವಿಜಯದಾಸರು

Tag: Pavamana Jagada Prana

ಕಾಮೆಂಟ್‌ಗಳಿಲ್ಲ: