ಶನಿವಾರ, ನವೆಂಬರ್ 2, 2013

ನಾಡಿನಂದ ಈ ದೀಪಾವಳಿ

ನಾಡಿನಂದ ಈ ದೀಪಾವಳಿ ಬಂತು
ಸಂತೋಷ ತಾಳಿ ನಮ್ಮೀ ಬಾಳ ಕಾರಿರುಳ
ಬಾನೀಗೆ ಬಂದ ಶುಭ ವೇಳ
ಈ ದಿವ್ಯ ಕಾಂತಿ ಮನ ದೀರ್ಘ ಶಾಂತಿ
ಹೊಮ್ಮೆ ಸಂಪ್ರೀತಿ
ನಾಡೀನಂದ ಈ ದೀಪಾವಳೀ

ಇಂದೀ ಉಲ್ಲಾಸ, ಪ್ರೀತಿ ವಿಕಾಸ ಜ್ಯೋತಿ ನಿನ್ನಿಂದ ಹಾಸ
ನಮ್ಮೀ ಆಸೆ ಮಕರಂದ ತಾ ಚಿಮ್ಮಿ ತಂದ ಆನಂದ
ಸಿಂಗಾರ, ಸಂಗೀತ, ಹಾಡಿ ಓಲಾಡಿ ಕೂಡೆ
ನಾಡೀನಂದ ಈ ದೀಪಾವಳೀ

ಸಿಡಿವ ಮತಾಪು ಮಿಗಿಲಂದ ಕೇಪು ಸೇರಿ ಕಣ್ಣಾಗೆ ಹೊಂಪು
ತುಂಬಿ ಬಾಳ ಹೂಬಾಣ ತಾ ಹೊಮ್ಮಿ ತಂದ ಹೊಂಬಣ್ಣ
ಹೊಸ ಬಾಳ ಸಂಕೇತ ಎಂದು ಸಂದೇಶ ತಂತು
ನಾಡೀನಂದ ಈ ದೀಪಾವಳೀ

ಬಾಳ ಬಂಗಾರ ಮನದ ಮಂದಾರ ಸೇರಿ ಆನಂದ ಕಾಲ
ನಂದಾ ದೀಪ ನೆಲೆಯಾಗಿ ಈ ಒಲುಮೆ ಎಂದೂ ಜೊತೆಯಾಗಿ
ಹಾಯಾದ ಆಮೋದ, ನೀಡೆ ಹಾರೈಸಿ ಬಂದ
ನಾಡಿನಂದ ಈ ದೀಪಾವಳೀ

ಚಿತ್ರ: ನಂದಾದೀಪ 
ಸಾಹಿತ್ಯ: ಸೋರಟ್ ಅಶ್ವಥ್
ಸಂಗೀತ: ಎಂ. ವೆಂಕಟರಾಜು
ಗಾಯನ: ಎಸ್. ಜಾನಕಿ ಮತ್ತು ಪಿ. ಲೀಲಾTag: Nadinanda ee Deepavali

ಕಾಮೆಂಟ್‌ಗಳಿಲ್ಲ: