ಸೋಮವಾರ, ನವೆಂಬರ್ 25, 2013

ಕನ್ನಡದ ಬಾವುಟ


ಏರಿಸಿ, ಹಾರಿಸಿ, ಕನ್ನಡದ ಬಾವುಟ
ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರಿ
ರಾಜೇಶ್ವರೀs....

ಕನ್ನಡದ ಬಾವುಟವ ಹಿಡಿಯದವರಾರು
ಕನ್ನಡದ ಬಾವುಟಕೆ ಮಡಿಯದವರಾರು
ನಮ್ಮ ಈ ಬಾವುಟಕೆ ಮಿಡಿಯದವರಾರು
ಹೇಳಿರೋ ಹೆಸರೊಂದು ನೆನಹಿನಲಿ ಸುಳಿದರೆ
ಉಗಿಸಿರೋ ಹೇಡಿ ತಾನೊಬ್ಬ ಮನೆಗುಳಿದರೇs
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರಿ
ರಾಜೇಶ್ವರೀs....

ಕನ್ನಡದ ನಾಡಲ ಕನ್ನಡದ ನುಡಿಯಲ
ಕನ್ನಡಿಗರೆದೆತರದ ತೆರೆಯಲ ಬೆಳೆಯಲ
ಬೆಳಕು ಹರಿಯಿತು ಇಲ್ಲಿ ಇರುಳು ಕವಿಯಿತು ಇಲ್ಲಿ
ನಾಡ ಹೆಗಲೇರಿ
ಏಳಿರೋ ಏಳಿರೋ ನಾಡ ಬಲಿ ಬೇಡಿರೋ
ಎಲ್ಲೊಲುಮೆನೂಕೂಡಿ ಬಂದೊಲುಮೆ ಕಾಯಿರೋ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರಿ
ರಾಜೇಶ್ವರೀs....

ಇಂದಿನದೆ ಹೇಳಿರೋ ಈ ನಮ್ಮ ಬಾವುಟ
ಕಂಡಿಹುದೆ ನೋಡಿರೋ ಈ ನಮ್ಮ ಬಾವುಟ
ಚಂದವಿದೆ  ಇಂದಿಗೂ ಕನ್ನಡದ ಬಾವುಟ
ಹಾರಿಸಿ, ತೋರಿಸಿ ಕೆಚ್ಚೆದೆಯ ಬಾವುಟ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರಿ
ರಾಜೇಶ್ವರೀs....

ಏನೇನತಂದುದೋ ಬಾನಾಡಿ ಬಾವುಟ
ಆವುದನು ಕಾಣದೋ ಜೀವಕಳೆ ಬಾವುಟ
ಕನ್ನಡದ ಬಾವುಟದಳಲ್ಲೊಂದಾದ ಬಾವುಟ
ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ
ಏರಿಸಿ ಹಾರಿಸಿ ಕನ್ನಡದ ಬಾವುಟ
ಹಾರಿಸಿ ತೋರಿಸಿ ಕೆಚ್ಚೆದೆಯ ಬಾವುಟ
ಬಾಳ್ ಕನ್ನಡ ತಾಯ್
ಏಳ್ ಕನ್ನಡ ತಾಯ್
ಆಳ್ ಕನ್ನಡ ತಾಯ್
ಕನ್ನಡಿಗರೊಡತಿ ಓ ರಾಜೇಶ್ವರಿ
ರಾಜೇಶ್ವರೀs....

ಸಾಹಿತ್ಯ: ಬಿ. ಎಂ. ಶ್ರೀ

Tag: Kannadada Bavuta

ಕಾಮೆಂಟ್‌ಗಳಿಲ್ಲ: