ಶುಕ್ರವಾರ, ನವೆಂಬರ್ 8, 2013

ಮಹಮ್ಮದ್ ಇಕ್ಬಾಲ್

ಮಹಮ್ಮದ್ ಇಕ್ಬಾಲ್

ಉರ್ದು ಮಹಾಕವಿ ಸರ್. ಮುಹಮ್ಮದ್ ಇಕ್ಬಾಲ್ (ನವೆಂಬರ್ 9, 1877 - ಏಪ್ರಿಲ್ 21, 1938) ಅವರು ಜನಿಸಿದ ದಿನ.  ಈ ಮಹಾನ್ ಕವಿಯ ಸಾರೆ ಜಹಾಂಸೆ ಅಚ್ಚಾ, ಹಿಂದೂಸ್ಥಾನ್ ಹಮಾರಗೀತೆಯನ್ನು ನಮ್ಮ ಕನ್ನಡದ ಕವಿ ಕೆ. ಎಸ್. ನಿಸಾರ್ ಅಹ್ಮದ್ ಅವರು ಹೀಗೆ ಅನುವಾದಿಸಿದ್ದಾರೆ.  

ಭಾರತವು ನಮ್ಮ ದೇಶ
- ಕೆ. ಎಸ್. ನಿಸಾರ್ ಅಹ್ಮದ್

ಇಡೀ ಲೋಕದಲ್ಲೇ ನಮ್ಮ ಭಾರತಕ್ಕೆ ಇಲ್ಲ ಎಣೆಯು,
ಆ ರಮ್ಯ ಪುಷ್ಪ ವಂದ ಕೋಗಿಲೆಗಳಂತೆ ನಾವು.

ನಾವಿರೆ ವಿದೇಶದಲ್ಲಿ, ತಾಯ್ನಾಡೊಳಿಹುದು ಮನಸು;
ಮನವೆಲ್ಲಿ ವಿಹರಿಸಿಹುದೋ ಅದೇ ನಮ್ಮ ನಿಜದ ನೆಲಸು.

ಉತ್ತುಂಗ ಪರ್ವತಕೆ ನೆರೆವಾಸಿ ನಭದ ಸ್ವರ್ಗ
ಆ ಅದ್ರಿ ಕಾವಲೆಮಗೆ, ರಕ್ಷಿಸುವ ಭದ್ರ ದುರ್ಗ.

ಗಿರಿ ಮಡಿಲೊಳಾಡುತಿಹವು ನಡಿ ಜೀವ ಸಾವಿರಾರು
ಈ ನಾಡ ಬನವ ಮಾಡಿ ನಂದನದ ಹೂವ ತೇರು.

ಜಲ ಶೋಭನಾಂಗೆ ಗಂಗೆ, ನೆನಪಿರುವುದೇನು ನಿನಗೆ?
ನಮ್ಮಿರವ ಕಾರವಾನು ಇಳಿದದ್ದು ನಿನ್ನ ಬದಿಗೆ.

ಬೋಧಿಸುವುದಿಲ್ಲ ಧರ್ಮ ಮಾನವರ ನಡುವೆ ದ್ವೇಷ
ಭಾರತೀಯ ಸುತರು ನಾವು, ಭಾರತವು ನಮ್ಮ ದೇಶ.

ಗ್ರೀಕ್ ರೋಮ್ ಈಜಿಪ್ಟ್ ನಾಗರಿಕತೆಗಳೀಗ ಸೊನ್ನೆ;
ಚಿರ ಮೆರೆಯುತಿರುವುದಿನ್ನೂ ತಾಯ್ನಾಡ ಹೆಸರು, ಚಿಹ್ನೆ.

ಅಚ್ಚಳಿಯದಿರಲು ದೆಸಹ ಅಡಗಿರುವುದೇನೊ ಗುಟ್ಟು;
ಯುಗಯುಗಗಳಿಂದ ಕಾಲ ಕಾರಿದರು ಹಗೆಯ ಸಿಟ್ಟು.

ಈ ವಿಶ್ವದಲ್ಲಿ ಇಕ್ಬಾಲ್, ನಮಗಿಲ್ಲ ನೆರವ ನೆರಳು;
ಯಾರರಿಯಬಹುದು ನಮ್ಮ ಹೃದಯಂತರಾಳದಳಲು.


ಸಾರೆ ಜಹಾಂಸೆ ಅಚ್ಚಾ (ಮೂಲ ಕವಿತೆ)
-ಸರ್ ಮಹಮ್ಮದ್ ಇಕ್ಬಾಲ್

ಸಾರೆ ಜಹಾಂ ಸೇ ಅಚ್ಛಾ ಹಿಂದೂಸ್ತಾನ್ ಹಮಾರಾ
ಹಂ ಬುಲಬುಲೇ ಹೈ ಉಸಕೀ ಯೇ ಗುಲಸಿತಾನ್ ಹಮಾರಾ

ಘುರ್ಬತ ಮೇ ಹೋ ಅಗರ್ ಹಂರಹತಾ ಹೈ ದಿಲ್ ವತನ್ ಮೇ
ಸಮಝೋ ವಹೀನ್ ಹಮೇಂ ಭೀ ದಿಲ್ ಹೋ ಜಹಾಂ ಹಮಾರಾ|

ಪರಬತ್ ವೋ ಸಬ್ ಸೇ ಊಂಚಾ, ಹಮಸಹಾಯ್ ಆಸಮಾಂ ಕಾ
ವೋ ಸಂತರೀ ಹಮಾರಾ, ವೋ ಪಾಸಬಾನ್ ಹಮಾರಾ

ಗೋದೀ ಮೇ ಖೇಲತೀ ಹೈ ಉಸಕೀ ಹಜಾರೋ ನದಿಯಾಂ
ಗುಲಶನ್ ಹೈ ಜಿನ್ ಕೆ ದಮ್ ಸೇ ರಶ್ಕ-ಏ-ಜನನ್ ಹಮಾರಾ

ಏ ಅಬ-ರೌದ-ಎ ಗಂಗಾ ವೋ ದಿನ್ ಹೈ ಯಾದ್ ತುಜ್ ಕೋ?
ಉತರಾ ತಿರೇ ಕಿನಾರೇ ಜಬ್ ಕಾರವಾಂನ್ ಹಮಾರಾ

ಮಝಹಬ್ ನಹೀ ಸಿಖಾತಾ ಆಪಸ್ ಮೇ ಬೈರ್ ರಖನಾ
ಹಿಂದೀ ಹೈ ಹಮ್, ವತನ್ ಹೈ ಹಿಂದೂಸ್ತಾನ ಹಮಾರಾ

ಯುನಾನ್-ಓ-ಮಿಸ್ರ-ಓ-ರೋಮಾ ಸಬ್ ಮಿತ್ ಗಯೇ ಜಹಾಂ ಸೇ
ಅಬ್ ತಕ್ ಮಗರ್ ಹೈ ಬಾಂಕೀ ನಾಮೋ-ನಿಶಾನ್ ಹಮಾರಾ

ಕುಚ್ ಬಾತ್ ಹೈ ಕಿಹ್ ಹಸ್ತೀ ಮಿಟ್ಟೀ ನಹೀ ಹಮಾರೀ
ಸದಿಯೋ ರಹಾ ಹೈ ದುಶ್ಮನ್ ದೌರ್-ಏ-ಜಮಾನ್ ಹಮಾರಾ

ಇಕ್ಬಾಲ ಕೋ ಇ ಮಹರಮ್ ಅಪನಾ ನಹೀ ಜಹಾಂ ಮೇ
ಮಾಲೂಮ್ ಕ್ಯಾ ಕಿಸೀ ಕೋ ದರ್ದ್-ಏ-ನಿಹಾನ್ ಹಮಾರಾ

Tag: Mohammad Iqbal


ಕಾಮೆಂಟ್‌ಗಳಿಲ್ಲ: