ಭಾನುವಾರ, ನವೆಂಬರ್ 24, 2013

ಕನ್ನಡ


ಕಣ್ಣು ತೆರೆದು ಮೊದಲ ಬೆಳಕು

ನೋಡಿದಾಗ ನಾನು
ಕೇಳಿದಂಥ ಮಾತು ಇದುವೆ
ಬಲ್ಲೆಯೇನು ನೀನು?


ತಾಯ ತೊಡೆಯ ತೊಟ್ಟಿಲಲ್ಲಿ

ಮಲಗಿದಾಗ ನಾನು
ತೊದಲಿದಂಥ ಮಾತು ಇದುವೆ
ಬಲ್ಲೆಯೇನು ನೀನು?


ಪ್ರೀತಿ ಹೊಂದಿ ಮನೆಯ ಮಂದಿ

ಆಡಿದಾಗ ನಾನು
ಕಲಿತುಕೊಂಡ ಮಾತು ಇದುವೆ
ಬಲ್ಲೆಯೇನು ನೀನು?


ಕನಸಿನಲ್ಲಿ ನೆನಸಿನಲ್ಲಿ

ಕಷ್ಟ-ಸುಖದಿ ನಾನು
ನೆನೆವ, ನುಡಿವ ಮಾತು ಇದುವೆ
ಬಲ್ಲೆಯೇನು ನೀನು?ಸಾಹಿತ್ಯ: ಪಳಕಳ ಸೀತಾರಾಮಭಟ್ಟ

ಕಾಮೆಂಟ್‌ಗಳಿಲ್ಲ: