ಶುಕ್ರವಾರ, ನವೆಂಬರ್ 29, 2013

ಕನ್ನಡ

ಕನ್ನಡ

ಕನ್ನಡವೆಂದರೆ ಎಂತಹದು? ಮಗು,
ಕನ್ನಡವೆಂದರೆ ಎಂತಹದು?
ಕೇಳುವ ಕಿವಿಗೆ ಕಿಣಿಕಿಣಿ ಗೆಜ್ಜೆ!
ಕನ್ನಡವೆಂದರೆ ಬಲು ಇಂಪು!
ಹೇಳುವ ನಾಲಗೆಗಿನಿಜೇನೇ ಅದು
ಕನ್ನಡವೆಂದರೆ ಬಲು ತಂಪು!
ಕನ್ನಡವೆಂದರೆ ಇಂತಹದು – ನಮ್ಮ
ಕನ್ನಡವೆಂದರೆ ಇಂತಹದು!

ಕನ್ನಡವೆಂದರೆ ಎಂತಹದು? ಮಗು
ಕನ್ನಡವೆಂದರೆ ಎಂತಹದು?
ಕಾಣುವ ಕಣ್ಣಿಗೆ ಮುತ್ತಿನ ಮಾಲೆ!
ಕನ್ನಡ ಅಕ್ಷರ ಕಡುಚೆಲುವು!
ಸಾವಿರಕಾಲ ಬಾಳಿದ ಕನ್ನಡ;
ಕನ್ನಡ ನಮ್ಮದಕಿದೆ ಬಲವು!
ಕನ್ನಡವೆಂದರೆ ಇಂತಹದು! – ನಮ್ಮ
ಕನ್ನಡವೆಂದರೆ ಇಂತಹದು!


ಸಾಹಿತ್ಯ: ಜಿ. ಪಿ. ರಾಜರತ್ನಂ

ಚಿತ್ರಕೃಪೆ: ನಿಲುಮೆ.ನೆಟ್

ಕಾಮೆಂಟ್‌ಗಳಿಲ್ಲ: