ಸೋಮವಾರ, ನವೆಂಬರ್ 4, 2013

ದೀಪದಿಂದ ದೀಪವ ಹಚ್ಚಬೇಕು

ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಿರೋ!
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಿರೋ!
ಮನಸಿನಿಂದ ಮನಸನು ಬೆಳಗಬೇಕು ಮಾನವ
ಮೇಲು ಕೀಳು ಭೇದ ನಿಲ್ಲಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ, ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

ಆಸೆ ಹಿಂದೆ ದುಃಖ ಎಂದರು
ರಾತ್ರಿ ಹಿಂದೆ ಹಗಲು ಎಂದರು
ದ್ವೇಷವೆಂದೂ ಹೊರೆ ಎಂದರು
ಹಬ್ಬವದಕೆ ಹೆಗಲು ಎಂದರು
ಎರಡು ಮುಖದ ನಮ್ಮ ಜನುಮದ ವೇಷಾವಳಿ
ತೆಗೆದು ಹಾಲ್ಬೆಳಕ ಕುಡಿವುದೇ ದೀಪಾವಳಿ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ, ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು

ಮಣ್ಣಿನಿಂದ ಹಣತೆಯಾದರೆ
ಬೀಜದಿಂದ ಎಣ್ಣೆಯಾಯಿತು
ಅರಳೆಯಿಂದ ಬತ್ತಿಯಾದರೆ
ಸುಡುವ ಬೆಂಕಿ ಜ್ಯೋತಿಯಾಯಿತು
ನಂದಿಸುವುದು ತುಂಬ ಸುಲಭವೋ ಹೇ ಮಾನವ
ಆನಂದಿಸುವುದು ತುಂಬ ಕಠಿಣವೋ ಹೇ ದಾನವ

ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲು
ಭೇದವಿಲ್ಲ ಬೆಂಕಿಗೆ ದ್ವೇಷವಿಲ್ಲ ಬೆಳಕಿಗೆ
ನೀ ತಿಳಿಯೋ, ನೀ ತಿಳಿಯೋ
ದೀಪದಿಂದ ದೀಪವ ಹಚ್ಚಬೇಕು ಮಾನವ
ಪ್ರೀತಿಯಿಂದ ಪ್ರೀತಿ ಹಂಚಲೂ...

ಚಿತ್ರ: ನಂಜುಂಡಿ
ಸಾಹಿತ್ಯ ಮತ್ತು ಸಂಗೀತ: ಹಂಸಲೇಖ
ಗಾಯನ: ಮಧುಬಾಲಕೃಷ್ಣ ಮತ್ತು  ನಂದಿತ



Tag: Deepadinda Deepava hacchabeku manava

ಕಾಮೆಂಟ್‌ಗಳಿಲ್ಲ: