ಸೋಮವಾರ, ಡಿಸೆಂಬರ್ 2, 2013

ಕಳ್ಳೇ ಕಾಯ್ ಕಳ್ಳೇ ಕಾಯ್

ಕಳ್ಳೇ ಕಾಯ್ ಕಳ್ಳೇ ಕಾಯ್
ಗರ್ಮಾ ಗರಂ ಕಳ್ಳೇ ಕಾಯ್
ತಾಜಾ ತಾಜಾ ಕಳ್ಳೇ ಕಾಯ್
ಗರ್ಮಾ ಗರಂ ಕಳ್ಳೇ ಕಾಯ್
ಬೆಂಗಳೂರು ಕರಗದ ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೇ ಕಾಯ್
ಕಳ್ಳೇ ಕಾಯ್ ಕಳ್ಳೇ ಕಾಯ್

ಶಾಲೆಯಾಗೆ ಮಕ್ಕಳು
ಕದ್ದು ತಿನ್ನೋ ಕಳ್ಳೇ ಕಾಯ್
ಪಾರ್ಕಿನಾಗೆ, ಕಬ್ಬನ್ ಪಾರ್ಕಿನಾಗೆ
ಲಾಲ್ ಬಾಗ್, ಪಾರ್ಕಿನಾಗೆ
ಪಾರ್ಕಿನಾಗೆ ಜೋಡಿಗಳು
ಕೊಳ್ಳುವಂಥ ಕಳ್ಳೇ ಕಾಯ್
ಮುನಿಸಿಕೊಂಡ ಹೆಂಡತಿಯ
ಒಲಿಸುವಂತ ಕಳ್ಳೇ ಕಾಯ್
ಏಯ್, ಮುನಿಸಿಕೊಂಡ ಹೆಂಡತಿಯ
ಒಲಿಸುವಂತ ಕಳ್ಳೇ ಕಾಯ್
ಅತ್ತೆಯಾ ಬಾಯಿಗೆ ಹೇ ಹೇ ಹೇ
ಅತ್ತೆಯ ಬಾಯಿಗೆ ಜೀವ ಹಾಕೋ ಕಳ್ಳೇ ಕಾಯ್
ತಾಜಾ ತಾಜಾ ಕಳ್ಳೇ ಕಾಯ್
ಗರ್ಮಾ ಗರಂ ಕಳ್ಳೇ ಕಾಯ್
ಬೆಂಗಳೂರು ಕರಗದ ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೇ ಕಾಯ್
ಕಳ್ಳೇ ಕಾಯ್ ಕಳ್ಳೇ ಕಾಯ್

ಸಂಗೀತ ಕಚೇರೀs........
ತ ದ ರೀ ನಾs ನಾs......
ಸಂಗೀತ ಕಛೇರಿ ನಡುವೆ
ತಿನ್ನೋ ಕಳ್ಳೇ ಕಾಯ್
ಸಂಗೀತ ಕಛೇರಿ ನಡುವೆ ತಿನ್ನೋ ಕಳ್ಳೇ ಕಾಯ್
ಭಾಷಣವ ಕೇಳುವಾಗ ಕುಕ್ಕಿ ತಿನ್ನೋ ಕಳ್ಳೇ ಕಾಯ್
ಹೊಟ್ಟೆಗಿಲ್ಲದಾತರಿಗೆ ಹಸಿವು ನೀಗೋ ಕಳ್ಳೇ ಕಾಯ್
ಗಾಂಧೀ ತಾತಾs......
ಗಾಂಧಿ ತಾತ ಮೆಚ್ಚಿಕೊಂಡ ಗರ್ಮಾ ಗರಂ ಕಳ್ಳೇ ಕಾಯ್
ಗಾಂಧಿ ತಾತ ಮೆಚ್ಚಿಕೊಂಡ ಗರ್ಮಾ ಗರಂ ಕಳ್ಳೇ ಕಾಯ್
ತಾಜಾ ತಾಜಾ ಕಳ್ಳೇ ಕಾಯ್
ಏಯ್, ಗರ್ಮಾ ಗರಂ ಕಳ್ಳೇ ಕಾಯ್
ಬೆಂಗಳೂರು ಕರಗದ ಬಸವನ ಪರಿಷೆಯ
ಬಡವರ ಬಾದಾಮಿ ಕಳ್ಳೇ ಕಾಯ್
ಕಳ್ಳೇ ಕಾಯ್. ಬಿಸಿ ಬಿಸಿ ಕಳ್ಳೇ ಕಾಯ್
ಕಳ್ಳೇ ಕಾಯ್.  ಗರ್ಮಾ ಗರಂ ಕಳ್ಳೇ ಕಾಯ್
ಕಳ್ಳೇ ಕಾಯ್ ಕಳ್ಳೇ ಕಾಯ್

ಚಿತ್ರ: ಕರುಳಿನ ಕರೆ
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಎಂ. ರಂಗರಾವ್
ಗಾಯನ: ಎಸ್. ಜಾನಕಿ
ಕಾಮೆಂಟ್‌ಗಳಿಲ್ಲ: