ಶನಿವಾರ, ಡಿಸೆಂಬರ್ 28, 2013

ದಿಗಂತ್

ದಿಗಂತ್

ಕನ್ನಡ ಚಿತ್ರರಂಗದ ಯುವಪೀಳಿಗೆಯ ಸುಂದರ ಹುಡುಗ ದಿಗಂತ್ ಡಿಸೆಂಬರ್ 28, 1983ರ ವರ್ಷದಲ್ಲಿ ಸಾಗರದಲ್ಲಿ ಜನಿಸಿದರು.  ತೀರ್ಥಹಳ್ಳಿಯಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸಿ ವಾಣಿಜ್ಯ ಪದವಿ ಪಡೆದ ದಿಗಂತ್ ರೂಪದರ್ಶಿಯಾಗಿ ಪೋಸ್ ನೀಡುತ್ತಾ 2006 ವರ್ಷದಿಂದ ಕನ್ನಡ ಚಿತ್ರರಂಗಕ್ಕೆ ಬಂದರು.

ಕ್ಯಾಲಿಫೋರ್ನಿಯಾ, ಎಸ್.ಎಮ್. ಎಸ್ 6260, ಮುಂಗಾರು ಮಳೆ, ಚಿಲಿಪಿಲಿ ಹಕ್ಕಿಗಳು ಮುಂತಾದ ಚಿತ್ರಗಳಲ್ಲಿ ಕಿರು ರೀತಿಯಲ್ಲಿ ಕಾಣಿಸಿಕೊಂಡ ದಿಗಂತ್, ಮುಂದೆ ಮೀರಾ ಮಾಧವ ರಾಘವ, ಮಸ್ತ್ ಮಜಾ ಮಾಡಿ, ಹೌಸ್ ಫುಲ್, ಗಾಳಿಪಟ ಮುಂತಾದ ಚಿತ್ರಗಳಲ್ಲಿ ಸ್ವಲ್ಪ ಹೆಚ್ಚಿನ ಪ್ರಸ್ತುತಿಯಲ್ಲಿ ಕಂಡರು. ಅವರು ಪ್ರಧಾನ ನಾಯಕರಾಗಿ ಮೊದಲು ಮಿಂಚಿದ್ದು ಮನಸಾರೆಚಿತ್ರದಲ್ಲಿ.  ಪಂಚರಂಗಿ, ಲೈಫು ಇಷ್ಟೇನೇ, ಪಾರಿಜಾತ, ಬರ್ಫಿ ಮುಂತಾದವು ಅವರ ಇನ್ನಿತರ ಗಣನೀಯ ಚಿತ್ರಗಳು.

ಕನ್ನಡದಲ್ಲಿ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಳ್ಳುತ್ತಲೇದಿಗಂತ್ ಇತ್ತೀಚಿಗೆ  ಹಿಂದೀ ಚಿತ್ರರಂಗವೆಂಬ ದಿಗಂತದತ್ತಲ್ಲೂ ಕಣ್ಣು ಹಾಯಿಸಿದ್ದಾರೆ. 


ಈ ನಮ್ಮ ಕನ್ನಡದ ಹುಡುಗ ಇನ್ನೂ ಹೆಚ್ಚಿನದನ್ನು ಸಾಧಿಸಲಿ, ಸುಖವಾಗಿರಲಿ ಎಂದು ಹಾರೈಸುತ್ತಾ ಹುಟ್ಟುಹಬ್ಬದ ಶುಭಾಶಯ ಹೇಳೋಣ.

Tag: Diganth

ಕಾಮೆಂಟ್‌ಗಳಿಲ್ಲ: