ಬುಧವಾರ, ಜನವರಿ 1, 2014

ಹೊಸ ವರುಷ ಬಂದಂತೆ ಯಾರು ಬಂದಾರುಹೊಸ ವರುಷ ಬಂದಂತೆ ಯಾರು ಬಂದಾರು
ಗಿಡ ಮರಕೆ ಹೊಸ ವಸ್ತ್ರ ಯಾರು ತಂದಾರು
ಹಾಡೆಂದು ಕೋಗಿಲೆಯ ಕೂಗಿ ಕರೆದಾರು
ಮಾವಿನ ಚಿಗುರನ್ನು ತಿನ್ನಲು ಕೊಟ್ಟಾರು

ಏನೋ ನಿರೀಕ್ಷೆ ಸೃಷ್ಟಿಯಲೆಲ್ಲ
ಹೂಗಳ ಪರೀಕ್ಷೆ ದುಂಬಿಗಳಿಗೆಲ್ಲ
ಬಂದನೊ ವಸಂತ ಬಂದಿಗಳೆ ಎಲ್ಲ
ಹೊಸ ಬಯಕೆ ಹೊಸ ಆಲೆ ರುಚಿ ರುಚಿಯ ಬೆಲ್ಲ

ಏನಿದೆಯೊ ಇಲ್ಲವೊ ಆಸೆಯೊಂದುಂಟು
ಬಾನಿನಲ್ಲಿ ಹೊಸ ಸೂರ್ಯ ಬರುವ ಮಾತುಂಟು
ಸಂಜೆಯಲಿ ಮಿಂಚಿರಲು ಅಂಚುಗಳ ಬಣ್ಣ
ತಪ್ಪಾದರು ಮುಗಿಲು ಜರಿಸೀರಿ ಅಣ್ಣ

ನೆನಪುಗಳ ಜೋಲಿಯಲಿ ತೂಗುವುದು ಮನಸ್ಸು
ಕಟ್ಟುವುದು ಮಾಲೆಯಲಿ ಹೊಸ ಹೊಸ ಕನಸ್ಸು
ನನಸಾಗದಿದ್ದರು ಕನಸ್ಸಿಗಿದೆ ಘನತೆ
ತೈಲಯಾವುದೆ ಇರಲಿ ಉರಿಯುವುದು ಹಣತೆ


ಸಾಹಿತ್ಯ: ಡಾ. ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟ

Tag: Hosa varusha bandante

ಕಾಮೆಂಟ್‌ಗಳಿಲ್ಲ: