ಶನಿವಾರ, ಜನವರಿ 11, 2014

ಇಷ್ಟು ದಿನ ಈ ವೈಕುಂಠ


ಇಷ್ಟು ದಿನ ಈ ವೈಕುಂಠ
ಎಷ್ಟು ದೂರವೋ ಎನುತಲಿದ್ದೆ

ದೃಷ್ಟಿಯಿಂದಲಿ ನಾನು ಕಂಡೆ

ಸೃಷ್ಟಿಧೀಶನೇ ಶ್ರೀರಂಗಶಾಯಿಎಂಟು ಏಳನು ಕಳೆದುದರಿಂದೆ

ಬಂಟರೈವರ ತುಳಿದುದರಿಂದೆ
ತುಂಟಕನೊಬ್ಬನ ತರಿದುದರಿಂದೆ
ಬಂಟನಾಗಿ ಬಂದೆನೋ ಶ್ರೀರಂಗಶಾಯಿ

ವಜ್ರ ವೈಢೂರ್ಯದ ತೊಲೆಗಳ ಕಂಡೆ
ಪ್ರಜ್ವಲಿಪ ಮಹಾದ್ವಾರವ ಕಂಡೆ
ನಿರ್ಜರಾದಿ ಮುನಿಗಳ ನಾ ಕಂಡೆ
ದುರ್ಜನಾಂತಕನೆ ಶ್ರೀರಂಗಶಾಯಿ

ರಂಭೆ ಊರ್ವಶಿ ಮೇಳವ ಕಂಡೆ
ತುಂಬುರು ಮುನಿ ನಾರದರನು ಕಂಡೆ
ಅಂಬುಜೋದ್ಭವ ರುದ್ರರ ಕಂಡೆ
ಶಂಬರಾರಿಪಿತನೆ ಶ್ರೀರಂಗಶಾಯಿ

ನಾಗಶಯನನ ಮೂರುತಿ ಕಂಡೆ
ಭೋಗಿಭೂಷಣ ಶಿವನನು ಕಂಡೆ
ಭಾಗವತರ ಸಮ್ಮೇಳವ ಕಂಡೆ
ಕಾಗಿನೆಲೆಯಾದಿಕೇಶವನ ನಾ ಕಂಡೆ


ಸಾಹಿತ್ಯ: ಕನಕದಾಸರು
ಗಾಯನ: ವಿದ್ಯಾಭೂಷಣರುಕಾಮೆಂಟ್‌ಗಳಿಲ್ಲ: