ಭಾನುವಾರ, ಜನವರಿ 12, 2014

ಇಂದಿನ ಹಿಂದೂ ದೇಶದ

ಇಂದಿನ ಹಿಂದೂ ದೇಶದ
ನವ ಯುವಕರೇ, ನವ ಯುವತಿಯರೇ
ಯಾವುದು ಕಪ್ಪು, ಯಾವುದು ಬಿಳುಪು
ಯಾವುದು ಸತ್ಯ, ಯಾವುದು ಮಿಥ್ಯ
ಅರಿಯದೆ ನಡೆದು, ಎಡವದಿರೀ
ಎಡವದಿರೀ, ಎಡವದಿರೀ

ಓಂ... ಓಂ....
ಈಶಾನಃ ಸರ್ವ ವಿದ್ಯಾನಾಂ ಈಶ್ವರಃ ಸರ್ವ ಭೂತಾನಾಂ
ಬ್ರಹಾಧಿಪತಿರ್ ಬ್ರಹ್ಮಣೋಧಿಪತಿರ್ ಬ್ರಹ್ಮಾ  ಶಿವೊಮೇ
ಅಸ್ತು ಸದಾ ಶಿವೋಂ.....
ಅಹಂ ಬ್ರಹ್ಮಾಸ್ಮಿ... ಅಹಂ ಬ್ರಹ್ಮಾಸ್ಮಿ

ಆದಿಗುರು ಶ್ರೀ ಶಂಕರ
ಭಾರತ ಮಾತೆಯ ಕುವರ
ಸಾರಿದ ಹಿಂದೂ ಧರ್ಮದ ಸಾರ
ಆತನ ಬೋಧನೆ ಅಮರ
ಆತನ ನಾಡು ಧರ್ಮದ ಬೀಡು
ಹಿಂಗಾಯ್ತೆ ಅನೀತಿ ಗೂಡು

ಹಿಂದೂ ಧರ್ಮ, ಹಿಂದೂ ದೇಶ, ಹಿಂದೂ ಧರ್ಮ...
“Wise you Lions of India
witness the sin, witness this test
whatever country needs are
muscles of iron and muscles of steel”
“ಭಾರತದ ಸಿಂಹಗಳೇ ಜಾಗ್ರತರಾಗಿರಿ” ಎಂದು
ವೀರವಾಣಿಯಾ ಮೊಳಗಿದ ಸ್ವಾಮೀ ವಿವೇಕಾನಂದ ಅಂದು
ನಿಮ್ಮನು ನೋಡಿ ಮರುಕದೆ ಕೂಡಿ
ಕಣ್ಣೀರ ಕರೆದಿಹ ಇಂದು

ಜೈ ಹಿಂದ್,  ಜೈ ಹಿಂದ್, ಜೈ ಹಿಂದ್,   ಜೈ ಹಿಂದ್
ಜೈ ಹಿಂದ್, ಜೈ ಹಿಂದ್
ಕೇಳಿಸದೇ, ಕೇಳಿಸದೇ,
ಮಣ್ಣಿದು ಮಿಡಿದಿಹ ಕವಿತೇ
ಪಾವನ ಗಂಗಾ, ಯಮುನಾ ಹರಿವಾ
ಭಾರತ ಭೂಮಿಯ ಚರಿತೇs
ಆಧುನಿಕತೆಯ ಬಿರುಗಾಳಿಯಲೀ
ಆರಿದೆ ಜ್ಞಾನದ ಹಣತೆ

ಇಂದಿನ ಹಿಂದೂ ದೇಶದ
ನವ ಯುವಕರೇ ನವ ಯುವತಿಯರೇ
ಯಾವುದು ಕಪ್ಪು, ಯಾವುದು ಬಿಳುಪು
ಯಾವುದು ಸತ್ಯ, ಯಾವುದು ಮಿಥ್ಯ
ಅರಿಯದೆ ನಡೆದು ಎಡವದಿರೀ
ಎಡವದಿರೀ, ಎಡವದಿರೀ
ಎಡವದಿರೀ ಎಡವದಿರೀ

ಚಿತ್ರ ಕಪ್ಪು ಬಿಳುಪು
ಸಾಹಿತ್ಯ: ಆರ್. ಎನ್. ಜಯಗೋಪಾಲ್
ಸಂಗೀತ: ಆರ್. ರತ್ನ
ಗಾಯನ: ಪಿ. ಬಿ. ಶ್ರೀನಿವಾಸ್ ಮತ್ತು ಸಂಗಡಿಗರುTag: Indina hindu deshada nava yuvakare

ಕಾಮೆಂಟ್‌ಗಳಿಲ್ಲ: