ಶುಕ್ರವಾರ, ಜನವರಿ 17, 2014

ಸುಚಿತ್ರಾ ಸೇನ್

ಸುಚಿತ್ರಾ ಸೇನ್

ಭಾರತೀಯ ಚಿತ್ರರಂಗದ ಶ್ರೇಷ್ಠ ಅಭಿನೇತ್ರಿಯರಲ್ಲಿ ಒಬ್ಬರೆನಿಸಿದ ಸುಚಿತ್ರಾ ಸೇನ್ ಅವರು ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಅನೇಕ ಪ್ರಸಿದ್ಧ ಬಂಗಾಳಿ ಚಿತ್ರಗಳಲ್ಲದೆ ಹಿಂದಿಯ ದೇವದಾಸ್, ಆಂಧಿ ಮುಂತಾದ ಚಿತ್ರಗಳಲ್ಲಿ ಸುಚಿತ್ರಾ ಸೇನ್ ಅವರ  ಮನೋಜ್ಞ ಅಭಿನಯ ಮನೆಮಾತಾಗಿತ್ತು.  ಉತ್ತಮ್ ಕುಮಾರ್ ನಾಯಕತ್ವದ ಬೆಂಗಾಳಿ ಚಿತ್ರ ಷಾರೆ ಚೌತೌರ್' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸೇನ್, 1955ರ ಹಿಂದಿ ಚಲನಚಿತ್ರ ದೇವದಾಸ್ ನಲ್ಲಿನ ಪಾರೋ ಪಾತ್ರದ ನಟನೆಗಾಗಿ ರಾಷ್ಟ್ರಪ್ರಶಸ್ತಿಯನ್ನು ಪಡೆದಿದ್ದರು. ಬಂಗಾಳಿ ಚಿತ್ರ ‘ಸಪ್ತಪದಿ’ ಚಿತ್ರದಲ್ಲಿನ ಅಭಿನಯಕ್ಕಾಗಿ ಅವರು 1963ರಲ್ಲಿ ಮಾಸ್ಕೋ ಫಿಲಂ ಫೆಸ್ಟಿವಲ್ ನಲ್ಲಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದರು. 1978ರ ನಂತರ ನಟನೆಗೆ ಗುಡ್ ಬೈ ಹೇಳಿದ್ದ ಅವರು ಸಾರ್ವಜನಿಕ ಜೀವನದಿಂದ ಹೊರಗುಳಿದಿದ್ದರು. 


ಸುಚಿತ್ರಾ ಸೇನ್ ಅವರ ಮಗಳು ಮೂನ್ ಮೂನ್ ಸೇನ್ ಮೊಮ್ಮಕ್ಕಳಾದ ರೈಮಾ ಹಾಗೂ ರಿಯಾ ಸೇನ್ ಕೂಡಾ ಚಿತ್ರರಂಗದಲ್ಲಿ ತಮ್ಮ ವೃತ್ತಿ ಬದುಕು ಕಟ್ಟಿಕೊಂಡಿದ್ದಾರೆ. 1972ರಲ್ಲಿ ಸುಚಿತ್ರಾ ಸೇನ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. 2005ರಲ್ಲಿ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನಿರಾಕರಿಸಿದ ಅವರು  ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಪಶ್ಚಿಮ ಬಂಗಾಳ ರಾಜ್ಯದ ಅತ್ಯುನ್ನುತ ಪ್ರಶಸ್ತಿ ಬಂಗಾ ವಿಭೂಷಣ್ ಪ್ರಶಸ್ತಿ ಕೂಡಾ ಸುಚಿತ್ರಾ ಅವರಿಗೆ ಸಂದಿದೆ. 

Tag: Suchitra Sen

ಕಾಮೆಂಟ್‌ಗಳಿಲ್ಲ: