ಗುರುವಾರ, ಜನವರಿ 2, 2014

ಸೋರುತಿಹುದು ಮನೆಯ ಮಾಳಿಗೆ

ಸೋರುತಿಹುದು ಮನೆಯ ಮಾಳಿಗಿ

ಅಜ್ಞಾನದಿಂದ
ಸೋರುತಿಹುದು ಮನೆಯ ಮಾಳಿಗಿ

ಸೋರುತಿಹುದು ಮನೆಯ ಮಾಳಿಗಿ
ದಾರು ಗಟ್ಟಿ ಮಾಳ್ಪರಿಲ್ಲ
ಕಾಳ ಕತ್ತಲೆಯೊಳಗೆ ನಾನು
ಮೇಲಕೇರಿ ಹೋಗಲಾರೆ
ಸೋರುತಿಹುದು ಮನೆಯ ಮಾಳಿಗಿ

ಮುರುಕು ತೊಲೆಯು ಹುಳುಕು ಜಂತಿ
ಕೊರೆದು ಸರಿದು ಕೀಲ ಸಡಲಿ
ಹರುಕು ಚಪ್ಪರ ಜೇರುಗಿಂಡಿ
ಮೇಲಕೇರಿ ಹೋಗಲಾರೆ
ಸೋರುತಿಹುದು ಮನೆಯ ಮಾಳಿಗಿ

ಕರಕಿ ಹುಲ್ಲು ಕಸವು ಹತ್ತಿ

ಹರಿದು ಸಾಲು ಇರಬಿ ಮುತ್ತಿ
ಜಲದ ಭರದಿ ಸರಿಯೆ ಮಣ್ಣು
ಒಳಗೆ ಹೊರಗೆ ಏಕವಾಗಿ.
ಸೋರುತಿಹುದು ಮನೆಯ ಮಾಳಿಗಿ


ಕಾಂತೆ ಕೇಳೆ ಕರುಣದಿಂದ
ಬಂತು ಕಾಣೆ ಹುಬ್ಬಿ ಮಳೆಯು
ಎಂತೊ ಶಿಶುನಾಳಧೀಶ ತಾನು
ನಿಂತು ಪೊರೆವನು ಎಂದು ನಂಬಿದೆ
ಸೋರುತಿಹುದು ಮನೆಯ ಮಾಳಿಗಿ


ಸಾಹಿತ್ಯ: ಶಿಶುನಾಳ ಶರೀಫ್ ಸಾಹೇಬರು

ಸಂಗೀತ ಮತ್ತು ಗಾಯನ: ಸಿ. ಅಶ್ವಥ್Tag: Sorutihudu maneya malige

ಕಾಮೆಂಟ್‌ಗಳಿಲ್ಲ: